ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಬಾಸ್ಮತಿ ಭತ್ತದ ರಫ್ತು ವಹಿವಾಟಿನಲ್ಲಿ ಶೇ.9ರಷ್ಟು ಏರಿಕೆ (India| Basmati rice | Exports | Season)
Bookmark and Share Feedback Print
 
ಮುಂಬರುವ ಅಕ್ಟೋಬರ್ ತಿಂಗಳಿನಿಂದ ಬಾಸ್ಮತಿ ಭತ್ತದ ಸೀಜನ್ ಆರಂಭವಾಗಲಿದ್ದು, ಪ್ರಸಕ್ತ ವರ್ಷದ ಅವಧಿಯ ರಫ್ತು ವಹಿವಾಟಿನಲ್ಲಿ ಶೇ.9ರಷ್ಟು ಏರಿಕೆಯಾಗಿ 3.5 ಮಿಲಿಯನ್ ಟನ್‌ಗಳಿಗೆ ತಲುಪುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ಭಾರತ ಪ್ರತಿ ವರ್ಷ 3.2 ಮಿಲಿಯನ್ ಟನ್ ಬಾಸ್ಮತಿ ಭತ್ತವನ್ನು ರಫ್ತು ಮಾಡುತ್ತಿದೆ. ಆದರೆ,ಪಾಕಿಸ್ತಾನದಲ್ಲಿ ನೆರೆ ಹಾವಳಿಯಂದಾಗಿ ಭತ್ತದ ಕೊರತೆಯನ್ನು ಎದುರಿಸುತ್ತಿರುವುದರಿಂದ, ರಫ್ತು ವಹಿವಾಟು 3.5 ಮಿಲಿಯನ್ ಟನ್‌ಗಳಿಗೆ ಏರಿಕೆಯಾಗಲಿದೆ ಎಂದು ಆಲ್ ಇಂಡಿಯಾ ರೈಸ್ ಎಕ್ಸ್‌ಪೋರ್ಟರ್ಸ್ ಅಸೋಸಿಯೇಶನ್ ಅಧ್ಯಕ್ಷ ವಿಜಯ್ ಸೇಠಿಯಾ ತಿಳಿಸಿದ್ದಾರೆ.

ಪಾಕಿಸ್ತಾನದಲ್ಲಿ ಎದುರಾದ ಪ್ರವಾಹ ಪ್ರಕೋಪದಿಂದಾಗಿ ಭತ್ತದ ಬೆಳೆ ನಾಶವಾಗಿರುವುದರಿಂದ ಪ್ರಸಕ್ತ ವರ್ಷದ ಅವಧಿಯಲ್ಲಿ ಬೇಡಿಕೆಯಲ್ಲಿ ಹೆಚ್ಚಳವಾಗುವುದು ಖಚಿತವಾಗಿದ್ದರಿಂದ ಬಾಸ್ಮತಿ ಭತ್ತದ ರಫ್ತು ವಹಿವಾಟಿನಲ್ಲಿ ಏರಿಕೆಯಾಗಲಿದೆ ಎಂದು ಹೇಳಿದ್ದಾರೆ.

ಭಾರತದ ಭತ್ತ ರಫ್ತು ವಹಿವಾಟುದಾರರು,ಪ್ರತಿ ಟನ್ ಬಾಸ್ಮತಿ ಭತ್ತದ ದರವನ್ನು ಕನಿಷ್ಠ 900 ಡಾಲರ್‌ಗಳಿಗೆ ನಿಗದಿಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ