ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಪ್ರಯಾಣಿಕರ ಕಾರುಗಳ ಮಾರಾಟದಲ್ಲಿ ಶೇ.33ರಷ್ಟು ಹೆಚ್ಚಳ (Car sales | Motorcycle | Commercial vehicles | SIAM)
Bookmark and Share Feedback Print
 
PTI
ದೇಶಿಯ ಪ್ರಯಾಣಿಕ ಕಾರುಗಳ ಮಾರಾಟ ಅಗಸ್ಟ್ ತಿಂಗಳ ಅವಧಿಯಲ್ಲಿ ಶೇ.33.24ರಷ್ಟು ಏರಿಕೆಯಾಗಿದ್ದು, 1,60,794 ಕಾರುಗಳನ್ನು ಮಾರಾಟ ಮಾಡಲಾಗಿದೆ.ಕಳೆದ ವರ್ಷದ ಅಗಸ್ಟ್ ತಿಂಗಳ ಅವಧಿಯಲ್ಲಿ 1,20,681ವಾಹನಗಳನ್ನು ಮಾರಾಟ ಮಾಡಲಾಗಿತ್ತು ಎಂದು ವಾಹನೋದ್ಯಮ ಮೂಲಗಳು ತಿಳಿಸಿವೆ.

ಸೂಸೈಟಿ ಆಫ್ ಇಂಡಿಯನ್ ಅಟೋಮೊಬೈಲ್ ಮ್ಯಾನುಫ್ಯಾಕ್ಚುರರ್ಸ್‌(ಸಿಯಾಮ್) ಪ್ರಕಾರ, ಅಗಸ್ಟ್ ತಿಂಗಳ ಅವಧಿಯಲ್ಲಿ ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಶೇ.19.04ರಷ್ಟು ಹೆಚ್ಚಳವಾಗಿ 7,27,542 ವಾಹನಗಳನ್ನು ಮಾರಾಟ ಮಾಡಲಾಗಿದೆ.ಕಳೆದ ವರ್ಷದ ಇದೇ ತಿಂಗಳ ಅವಧಿಯಲ್ಲಿ 6,11,168 ವಾಹನಗಳನ್ನು ಮಾರಾಟ ಮಾಡಲಾಗಿತ್ತು.

ಒಟ್ಟು ದ್ವಿಚಕ್ರ ವಾಹನಗಳ ಮಾರಾಟ ಅಗಸ್ಟ್ ತಿಂಗಳ ಅವಧಿಯಲ್ಲಿ ಶೇ.23.24ರಷ್ಟು ಹೆಚ್ಚಳವಾಗಿ,9,57,304 ವಾಹನಗಳನ್ನು ಮಾರಾಟ ಮಾಡಲಾಗಿದೆ. ಕಳೆದ ವರ್ಷದ ಇದೇ ತಿಂಗಳ ಅವಧಿಯಲ್ಲಿ 7,76,772 ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಲಾಗಿತ್ತು.

ವಾಣಿಜ್ಯ ವಾಹನಗಳ ಮಾರಾಟದಲ್ಲಿ ಶೇ.28.12ರಷ್ಟು ಏರಿಕೆಯಾಗಿ, 52,030 ವಾಹನಗಳನ್ನು ಮಾರಾಟ ಮಾಡಲಾಗಿದೆ. ಕಳೆದ ವರ್ಷದ ಇದೇ ತಿಂಗಳ ಅವಧಿಯಲ್ಲಿ 40,609 ವಾಹನಗಳನ್ನು ಮಾರಾಟ ಮಾಡಲಾಗಿತ್ತು ಎಂದು ಸಿಯಾಮ್ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ