ಪ್ರಸಕ್ತ ಆರ್ಥಿಕ ವರ್ಷದ ಆರಂಬಿಕ ಐದು ತಿಂಗಳುಗಳ ಅವಧಿಯ ರೈಲ್ವೆ ಇಲಾಖೆ ಆದಾಯದಲ್ಲಿ, ಶೇ.7.95ರಷ್ಟು ಏರಿಕೆಯಾಗಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.
ಕಳೆದ ಏಪ್ರಿಲ್-ಅಗಸ್ಟ್ ತಿಂಗಳ ಅವಧಿಯಲ್ಲಿ ರೈಲ್ವೆ ಇಲಾಖೆಯ ಒಟ್ಟು ಆದಾಯ 37015.28 ಕೋಟಿ ರೂಪಾಯಿಗಳಾಗಿವೆ. ಕಳೆದ ವರ್ಷದ ಇದೇ ತಿಂಗಳುಗಳ ಅವಧಿಯಲ್ಲಿ ಆದಾಯ 34289.58 ಕೋಟಿ ರೂಪಾಯಿಗಳಾಗಿತ್ತು.
ಐದು ತಿಂಗಳುಗಳ ಅವಧಿಯಲ್ಲಿ ಸರಕು ಸಾಗಾಣೆ ಆದಾಯ 23129.08 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ.ಕಳೆದ ವರ್ಷದ ಇದೇ ಅವಧಿಯಲ್ಲಿ 24768.16 ಕೋಟಿ ರೂಪಾಯಿಗಳಾಗಿತ್ತು ಎಂದು ಅಧಿಕಾರಿಗಳು ಬಿಡುಗಡೆ ಮಾಡಿದ ಅಂಕಿ ಅಂಶಗಳಲ್ಲಿ ಬಹಿರಂಗಪಡಿಸಿದ್ದಾರೆ.
ಪ್ರಯಾಣಿಕ ಆದಾಯ 10592.53 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ.ಕಳೆದ ವರ್ಷಧ ಇದೇ ಅವಧಿಯಲ್ಲಿ 9715.78 ಕೋಟಿ ರೂಪಾಯಿಗಳಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏಪ್ರಿಲ್-ಅಗಸ್ಟ್ ತಿಂಗಳ ಅವಧಿಯಲ್ಲಿ 3251.33 ಮಿಲಿಯನ್ ಪ್ರಯಾಣಿಕರು ಮುಂಗಡ ಬುಕ್ಕಿಂಗ್‌ಗೆ ಮೊರೆಹೋಗಿದ್ದರು. ಕಳೆದ ವರ್ಷದಲ್ಲಿ ಮುಂಗಡ ಟಿಕೆಟ್ ಪಡೆದವರ ಸಂಖ್ಯೆ 3067.14 ಮಿಲಿಯನ್‌ಗಳಿಗೆ ತಲುಪಿತ್ತು ಎಂದು ರೈಲ್ವೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.