ಆಹಾರ ಧಾನ್ಯಗಳು,ಹಣ್ಣು ಮತ್ತು ಹಾಲು ದರಗಳಲ್ಲಿ ಏರಿಕೆಯಾಗಿದ್ದರಿಂದ, ಅಗಸ್ಟ್ 28ಕ್ಕೆ ವಾರಂತ್ಯಗೊಂಡಂತೆ ಆಹಾರ ಹಣದುಬ್ಬರ ದರ ಶೇ.11.47ಕ್ಕೆ ಏರಿಕೆಯಾಗಿದೆ.
ಜುಲೈ ಮತ್ತು ಅಗಸ್ಟ್ ಮಧ್ಯಭಾಗದಲ್ಲಿ ಇಳಿಕ ಕಂಡ ಆಹಾರ ಹಣದುಬ್ಬರ ದರ, ಸತತ ಎರಡನೇ ವಾರದ ಅವಧಿಗೆ ಏರಿಕೆ ಕಂಡು ಜನಸಾಮಾನ್ಯರಲ್ಲಿ ಆತಂಕಮೂಡಿಸಿದೆ.
ಅಗಸ್ಟ್ 21ಕ್ಕೆ ವಾರಂತ್ಯಗೊಂಡಂತೆ ಆಹಾರ ಹಣದುಬ್ಬರ ದರ ಶೇ.10.86ಕ್ಕೆ ತಲುಪಿತ್ತು.
ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಿಗೆ ಹೋಲಿಸಿದಲ್ಲಿ ದ್ವಿದಳ ಧಾನ್ಯ ಭತ್ತ ಮತ್ತು ಗೋಧಿ ದರಗಳಲ್ಲಿ ಏರಿಕೆಯಾಗಿದ್ದರಿಂದರಿಂದ ವಾರ್ಷಿಕ ಆಧಾರದಲ್ಲಿ ಧಾನ್ಯಗಳ ದರ ಶೇ.5.07ಕ್ಕೆ ಏರಿಕೆ ಕಂಡಿದೆ.
ಏತನ್ಮಧ್ಯೆ ವಾರ್ಷಿಕ ಆಧಾರಕ್ಕೆ ಹೋಲಿಸಿದಲ್ಲಿ, ದ್ವಿದಳ ಧಾನ್ಯಗಳ ದರಗಳಲ್ಲಿ ಶೇ.13.44ರಷ್ಟು ಏರಿಕೆ ಕಂಡಿದೆ. ಭತ್ತ ಮತ್ತು ಗೋಧಿ ದರಗಳಲ್ಲಿ ಕ್ರಮವಾಗಿ ಶೇ.4.74 ಹಾಗೂ ಶೇ.7.04ರಷ್ಟು ಏರಿಕೆ ಕಂಡಿದೆ
ಇತರ ಆಹಾರ ವಸ್ತುಗಳ ದರಗಳಲ್ಲಿ ಹಾಲಿನದರದಲ್ಲಿ ಶೇ.17ರಷ್ಟು ಏರಿಕೆಯಾಗಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.