ಉಕ್ಕು ದರಗಳಲ್ಲಿ ಇಳಿಕೆಯಾಗುವ ನಿರೀಕ್ಷೆಗಳಿಲ್ಲ:ಟಾಟಾ ಸ್ಟೀಲ್
ಕೋಲ್ಕತಾ, ಗುರುವಾರ, 9 ಸೆಪ್ಟೆಂಬರ್ 2010( 16:00 IST )
ಕಚ್ಚಾ ವಸ್ತುಗಳ ದರಗಳಲ್ಲಿ ನಿರಂತರವಾಗಿ ಏರಿಕೆಯಾಗುತ್ತಿರುವುದರಿಂದ, ಸ್ಟೀಲ್ ದರಗಳಲ್ಲಿ ಇಳಿಕೆಯಾಗುವ ಸಾಧ್ಯತೆಗಳಿಲ್ಲ ಎಂದು ಟಾಟಾ ಸ್ಟೀಲ್ ವ್ಯವಸ್ಥಾಪಕ ನಿರ್ದೇಶಕ ಎಚ್.ಎಂ.ನೆರೂರ್ಕರ್ ಹೇಳಿದ್ದಾರೆ.
ಚೇಂಬರ್ ಆಫ್ ಇಂಡಿಯನ್ ಇಂಡಸ್ಟ್ರೀಸ್ ಕಾರ್ಯಕ್ರಮದಲ್ಲಿ ಮಾತನಾಡಿದ ನೆರೂರ್ಕರ್,ಕಚ್ಚಾ ವಸ್ತುಗಳ ದರಗಳಲ್ಲಿ ನಿರಂತರ ಏರಿಕೆಯಾಗುತ್ತಿರುವುದರಿಂದ ಸ್ಟೀಲ್ ದರಗಳು ಇಳಿಕೆಯಾಗುವ ನಿರೀಕ್ಷೆಗಳಿಲ್ಲ ಎಂದು ತಿಳಿಸಿದ್ದಾರೆ.
ದಕ್ಷಿಣ ಆಫ್ರಿಕಾದಲ್ಲಿರುವ ಟಾಟಾಸ್ಟೀಲ್ ಘಟಕವನ್ನು ಮಾರಾಟ ಮಾಡುವ ಯೋಜನೆಯ ಕುರಿತಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ನೆರೂರ್ಕರ್,ಅಂತಹ ಯಾವುದೇ ಯೋಜನೆಗಳಿಲ್ಲ. ಆದರೆ ಕಂಪೆನಿಯನ್ನು ಖರೀದಿಸುವ ಆಸಕ್ತಿಯನ್ನು ಹೊಂದಿರುವ ಗ್ರಾಹಕರಿದ್ದಾರೆ ಎಂದು ಹೇಳಿದ್ದಾರೆ.
ಟಾಟಾ ಸ್ಟೀಲ್ ಕಂಪೆನಿ ವಿಸ್ತರಣೆ ಅಂಗವಾಗಿ 5.5 ಬಿಲಿಯನ್ ಡಾಲರ್ ಹೂಡಿಕೆ ಮಾಡಲು ನಿರ್ಧರಿಸಿದ್ದು, ಹಲವು ಕಂಪೆನಿಗಳೊಂದಿಗೆ ಮಾತುಕತೆಗಳು ಮುಂದುವರಿದಿವೆ ಎಂದು ಟಾಟಾ ಸ್ಟೀಲ್ ವ್ಯವಸ್ಥಾಪಕ ನಿರ್ದೇಶಕ ಎಚ್.ಎಂ.ನೆರೂರ್ಕರ್ ತಿಳಿಸಿದ್ದಾರೆ.