ನವದೆಹಲಿ, ಶುಕ್ರವಾರ, 10 ಸೆಪ್ಟೆಂಬರ್ 2010( 11:45 IST )
ದೇಶದ ಕೈಗಾರಿಕೆ ಕ್ಷೇತ್ರದ ಉತ್ಪಾದನೆ ಕುಸಿಯುವ ಯಾವುದೇ ರೀತಿಯ ಸಂಕೇತಗಳು ಎದುರಾಗಿಲ್ಲವೆಂದು ವಿತ್ತಸಚಿವಾಲಯದ ಸಲಹೆಗಾರ ಕೌಶಿಕ್ ಬಸು ಹೇಳಿದ್ದಾರೆ.
ಕೈಗಾರಿಕೆ ವೃದ್ಧಿ ದರ ಜುಲೈ ತಿಂಳ ಅವಧಿಯಲ್ಲಿ ಶೇ.7.7ಕ್ಕೆ ಚೇತರಿಕೆ ಕಂಡಿದೆ ಎನ್ನುವ ವರದಿಗಳು ಬಹಿರಂಗವಾದ ಒಂದು ದಿನದ ನಂತರ ಬಸು ಹೇಳಿಕೆ ಹೊರಬಿದ್ದಿದೆ.
ಆರ್ಥಿಕತೆಯಲ್ಲಿ ಏಷ್ಯಾದ ಮೂರನೇ ದೇಶವಾದ ಭಾರತದಲ್ಲಿ, ಹಣದುಬ್ಬರ ಒಂದಂಕಿಗೆ ತಲುಪಿದ್ದರಿಂದ ಕೈಗಾರಿಕೆ ವೃದ್ಧಿ ದರ ಶೇ.7.1ಕ್ಕೆ ಏರಿಕೆ ಕಂಡಿತ್ತು.ಕಳೆದ 13 ತಿಂಗಳುಗಳ ಅವಧಿಯಲ್ಲಿ ನಿಧಾನಗತಿಯ ಕುಸಿತ ಕಂಡಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
ಆದರೆ,ಕೈಗಾರಿಕೆ ವೃದ್ಧಿ ದರ ನಿಧಾನವಾಗಿ ಕುಸಿಯುತ್ತಿದೆ ಎಂದು ಕೇಂದ್ರ ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಆಹ್ಲುವಾಲಿಯಾ ಹೇಳಿದ್ದಾರೆ.