ವಾಷಿಂಗ್ಟನ್, ಶುಕ್ರವಾರ, 10 ಸೆಪ್ಟೆಂಬರ್ 2010( 12:38 IST )
ಕಳೆದ ವರ್ಷದ ಅವಧಿಯಲ್ಲಿ ವಿಶ್ವದಲ್ಲಿ ಗರಿಷ್ಠ ಆರ್ಥಿಕ ಚೇತರಿಕೆಯ ಮಧ್ಯೆಯು ಭಾರತ, ಫೋರ್ಬ್ಸ್ ಪಟ್ಟಿಯಲ್ಲಿ ವಹಿವಾಟು ಸ್ನೇಹಿ ರಾಷ್ಟ್ರಗಳ ಪಟ್ಟಿಯಲ್ಲಿ 77ನೇ ಸ್ಥಾನವನ್ನು ಪಡೆದಿದೆ. ಅಮೆರಿಕ ಎರಡನೇ ಸ್ಥಾನದಿಂದ ಒಂಬತ್ತನೆ ಸ್ಥಾನಕ್ಕೆ ಕುಸಿತ ಕಂಡಿದೆ.
ಮುಕ್ತ ಆರ್ಥಿಕ ಮಾರುಕಟ್ಟೆಯಲ್ಲಿ ಭಾರತ ಅಭಿವೃದ್ಧಿಯನ್ನು ಹೊಂದುತ್ತಿದೆ ಎಂದು ಯುಎಸ್ ಬಿಜಿನೆಸ್ ಮ್ಯಾಗ್‌ಜಿನ್ ಫೋರ್ಬ್ಸ್ ವರದಿಯಲ್ಲಿ ಪ್ರಕಟಿಸಿದ್ದು, ನಂತರದ ಸ್ಥಾನವನ್ನು ಶ್ರೀಲಂಕಾ(83), ಚೀನಾ (90) ಮತ್ತು ಪಾಕಿಸ್ತಾನ(92)ಕ್ಕೆ ನೀಡಲಾಗಿದೆ.
ಆರ್ಥಿಕ ಉದಾರೀಕರಣ ಹಾಗೂ ವಿದೇಶಿ ವ್ಯಾಪಾರ ಮತ್ತು ಹೂಡಿಕೆ ನಿಯಂತ್ರಣವನ್ನು ಮುಕ್ತಗೊಳಿಸಿದ್ದರಿಂದ, 1990ರ ನಂತರ ದೇಶದ ಆರ್ಥಿಕ ವೃದ್ಧಿ ದರ 1997ರಿಂದ ಶೇ.7ಕ್ಕೆ ಚೇತರಿಕೆ ಕಂಡಿದೆ.
ಜಾಗತಿಕ ಆರ್ಥಿಕ ಕುಸಿತದಿಂದಾಗಿ, ಕಳೆದ 2008ರ ಅವಧಿಯಲ್ಲಿ ದೇಶದ ಕೈಗಾರಿಕೆ ಕ್ಷೇತ್ರ ಕುಸಿತ ಕಂಡಿತ್ತು. 2009ರ ಅವಧಿಯಲ್ಲಿ ಜಿಡಿಪಿ ದರ ಶೇ.6.5ಕ್ಕೆ ಇಳಿಕೆ ಕಂಡಿತ್ತು.