ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಐಎಂಎಫ್‌ನಿಂದ ಬಾಂಗ್ಲಾದೇಶಕ್ಕೆ 10 ಟನ್ ಚಿನ್ನ ಮಾರಾಟ (IMF | Gold | Bangladesh | Bullion | US currency)
Bookmark and Share Feedback Print
 
ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ(ಐಎಂಎಫ್), ಹತ್ತು ತಿಂಗಳ ನಂತರ ಮೊದಲ ಬಾರಿಗೆ ಬಾಂಗ್ಲಾದೇಶದ ಸೆಂಟ್ರಲ್‌ಬ್ಯಾಂಕ್‌ಗೆ 10 ಟನ್ ಚಿನ್ನವನ್ನು ಮಾರಾಟ ಮಾಡಿದೆ ಎಂದು ಐಎಂಎಫ್ ಮೂಲಗಳು ತಿಳಿಸಿವೆ.

ವಿಶ್ವದ ಪ್ರಮುಖ ಕರೆನ್ಸಿಗಳಾದ ಡಾಲರ್ ಮತ್ತು ಯುರೋ ತೊಳಲಾಟದಿಂದಾಗಿ, ಐಎಂಎಫ್, ಬಾಂಗ್ಲಾದೇಶಕ್ಕೆ ಚಿನ್ನವನ್ನು ಮಾರಾಟ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ(ಐಎಂಎಫ್)ಯ ಅಡಳಿತ ಮಂಡಳಿ 403.3 ಮಿಲಿಯನ್ ಡಾಲರ್‌ಗಳಿಗೆ 10 ಟನ್ ಚಿನ್ನವನ್ನು ಮಾರಾಟ ಮಾಡಲು ಅನುಮತಿ ನೀಡಿತ್ತು.ಚಿನ್ನದ ಮಾರುಕಟ್ಟೆಯ ದರ ಏರಿಕೆಯಿಂದಾಗಿ 403 ಮಿಲಿಯನ್ ಡಾಲರ್‌ಗಳಿಗೆ ಮಾರಾಟ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚಿನ್ನದ ದರ ಸೆಪ್ಟಂಬರ್ 7 ರಂದು ಎರಡು ತಿಂಗಳ ಗರಿಷ್ಠ ಏರಿಕೆ ಕಂಡು, ಸಾಗರೋತ್ತರ ಮಾರುಕಟ್ಟೆಯಲ್ಲಿ ಪ್ರತಿ ಔನ್ಸ್‌ಗೆ 1,264 ಡಾಲರ್‌ಗಳಿಗೆ ತಲುಪಿತ್ತು.
ಸಂಬಂಧಿತ ಮಾಹಿತಿ ಹುಡುಕಿ