ಯುವ ಜನತೆಯ ಆಶೋತ್ತರಗಳನ್ನೆಲ್ಲ ಪೂರೈಸಲು ಮೊಬೈಲ್ ಸೇವಾ ಸಂಸ್ಥೆ ಎಂಟಿಎಸ್ ಇಂಟರ್‌ನೆಟ್ ಸೌಲಭ್ಯ ಒಳಗೊಂಡ ಮೂರು ಹೊಸ ಬಗೆಯ ಮೊಬೈಲ್‌ಗಳನ್ನು ಬಿಡುಗಡೆ ಮಾಡಿದೆ.
ಸಿಡಿಎಂಎ ತಂತ್ರಜ್ಞಾನದ ಬಝ್, ಅಲೈವ್ ಮತ್ತು ಐವರಿ ಹೆಸರಿನ ಈ ಹೊಸ ಮೊಬೈಲ್‌ಗಳು ಇಂಟರ್‌ನೆಟ್ ಆಧಾರಿತ ದತ್ತಾಂಶ ಸೇವೆ ಹೊಂದಿವೆ.
ದಿನದ ಯಾವುದೇ ಸಮಯದಲ್ಲಿಯೂ ಇಂಟರ್‌ನೆಟ್ ಸಂಪರ್ಕ ಪಡೆಯಬಹುದಾದ ಈ ಸ್ಮಾರ್ಟ್ ಮೊಬೈಲ್‌ಗಳು ಗರಿಷ್ಠ ವೇಗದ ಮಾಹಿತಿ ವಿನಿಮಯಕ್ಕೆ ಮತ್ತು ಟೆಲಿವಿಷನ್ ಕಾರ್ಯಕ್ರಮಗಳ ವೀಕ್ಷಣೆಗೂ ನೆರವಾಗಲಿವೆ ಎಂದು ಸಂಸ್ಥೆಯ ಕರ್ನಾಟಕ ವೃತ್ತದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸುರೇಶ್.ಎಸ್.ಕುಮಾರ್ ತಿಳಿಸಿದ್ದಾರೆ.