ಆರ್ಥಿಕವಾಗಿ ದುರ್ಬಲವಾಗಿರುವವರಿಗೆ ಜೀವ ವಿಮೆ ಹಾಗೂ ಸಾಮಾನ್ಯ ವಿಮೆ ಒದಗಿಸಲು ವಿಮಾ ನಿಯಂತ್ರಕ ಐಆರ್‌ಡಿಎ ಇದೀಗ ಹೊಸ ಯೋಜನೆಯೊದನ್ನು ರೂಪಿಸಲು ಚಿಂತಿಸಿದೆ.
ನಗರ ಹಾಗೂ ಹಳ್ಳಿಗಳಲ್ಲಿ ವಾಸಿಸುವ ಬಡ ಜನರಿಗೆ ಒಂದು ರೂಪಾಯಿಯಿಂದ 10 ಲಕ್ಷ ರೂಪಾಯಿಗಳವರೆಗೆ ವಿಮಾ ಸೌಕರ್ಯ ನೀಡುವಂಥ ಯೋಜನೆಯೊಂದನ್ನು ರೂಪಿಸಲು ತಯಾರಿ ನಡೆಸಿದೆ.
ಈ ಯೋಜನೆಯಡಿ ಅತಿ ಕಡಿಮೆ ಪ್ರೀಮಿಯಂ ಹಣ ವಿಧಿಸಲಾಗುತ್ತಿದ್ದು, ಒಂದು ಲಕ್ಷ ರೂಪಾಯಿಗಳವರೆಗಿನ ವಿಮೆಗೆ 2,224 ರೂಪಾಯಿಗಳಿಂದ 4,613 ರೂಪಾಯಿವರೆಗೆ ಪ್ರೀಮಿಯಂ ಇರಲಿದೆ. 2 ಲಕ್ಷ ರೂಪಾಯಿಗಳವರೆಗಿನ ವಿಮೆಗೆ 4,448 ರೂಪಾಯಿಗಳಿಂದ 9,226 ರೂಪಾಯಿಗಳ ಪ್ರೀಮಿಯಂ ಇರಲಿದೆ. 10 ಲಕ್ಷ ರೂಪಾಯಿಗಳ ವಿಮೆಗೆ 22,240 ರೂಪಾಯಿಗಳಿಂದ 46,130 ರೂಪಾಯಿಗಳವರೆಗೆ ಪ್ರೀಮಿಯಂ ಹಣ ತಗುಲಲಿದೆ.
ಸದ್ಯ ಈ ಪ್ರಸ್ಥಾವನಾ ವಿಮಾ ಯೋಜನೆಯ ಬಗ್ಗೆ ಅಭಿಪ್ರಾಯಗಳನ್ನು ತಿಳಿಸಲು ವಿಮಾ ಕಂಪನಿಗಳಿಗೆ ಐಆರ್‌ಡಿಎ ತಿಳಿಸಿದೆ. ಚರ್ಚೆ ಪರಾಮರ್ಶೆಗಳ ನಂತರ ಈ ವಿಮಾ ಯೋಜನೆ ಜಾರಿಗೆ ಬರುವ ಸಂಭವವಿದೆ.