ಭಾರತದ ಖ್ಯಾತ ಉದ್ಯಮಿ ಮುಕೇಶ್ ಅಂಬಾನಿ 62 ಬಿಲಿಯನ್ ಡಾಲರ್ ಸಂಪತ್ತಿನೊಂದಿಗೆ, ಮುಂಬರುವ 2014ರ ವೇಳೆಗೆ ವಿಶ್ವದ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಲಿದ್ದಾರೆ ಎಂದು ಅಮೆರಿಕದ ಬಿಜಿನೆಸ್ ಮ್ಯಾಗ್‌ಜಿನ್ ಅಧ್ಯಯನ ವರದಿಯಲ್ಲಿ ಬಹಿರಂಗಪಡಿಸಿದೆ.
ಪ್ರಸ್ತುತ 29 ಬಿಲಿಯನ್ ಡಾಲರ್ ಸಂಪತ್ತನ್ನು ಹೊಂದಿರುವ ಅಂಬಾನಿ, 2014ರ ವೇಳೆಗೆ ವಿಶ್ವದ ಶ್ರೀಮಂತ ಮೆಕ್ಸಿಕೊದ ಉದ್ಯಮಿ ಕಾರ್ಲೊಸ್ ಸ್ಲಿಮ್ ಅವರನ್ನು ಹಿಂದಿಕ್ಕಲಿದ್ದಾರೆ ಎಂದು ಫೋರ್ಬ್ಸ್ ಮೂಲಗಳು ತಿಳಿಸಿವೆ.
ಅಂಬಾನಿಯವರ ನಿವ್ವಳ ಸಂಪತ್ತು 62 ಬಿಲಿಯನ್ ಡಾಲರ್‌ಗಳ ಏರಿಕೆಯಾಗಲಿದ್ದು, ಮೆಕ್ಸಿಕೊದಲ್ಲಿನ ರಾಜಕೀಯ ಅಸ್ಥಿರತೆ ಹಾಗೂ ಆರ್ಥಿಕ ಬಿಕ್ಕಟ್ಟಿನಿಂದಾಗಿ ಕಾರ್ಲೊಸ್ ಸಂಪತ್ತು ಕುಸಿಯಲಿದೆ ಎಂದು ಅಧ್ಯಯನ ವರದಿಯಲ್ಲಿ ಬಹಿರಂಗಪಡಿಸಿದೆ.
53ವರ್ಷ ವಯಸ್ಸಿನ ಮುಕೇಶ್ ಅಂಬಾನಿ ವಿಶ್ವ ಬಿಲಿಯನೇರ್‌ಗಳ ಸಾಲಿನಲ್ಲಿ, ಫೋರ್ಬ್ಸ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ.
ರಾಜಕೀಯ, ಇಂಧನ, ವೈದ್ಯಕೀಯ, ಹಣಕಾಸು, ವಿಜ್ಞಾನ ಸಾಮಾಜಿಕ, ತಂತ್ರಜ್ಞಾನ ಕ್ಷೇತ್ರಗಳಲ್ಲಿ ಮುಂದಿನ 10 ವರ್ಷಗಳ ಸಾಧನೆಯನ್ನು ಫೋರ್ಬ್ಸ್ ಬಹಿರಂಗಪಡಿಸಿದೆ.