ಬಹುಕೋಟಿ 2ಜಿ ತರಂಗಾಂತರಗಳ ಅವ್ಯವಹಾರ ಹಗರಣ ಕುರಿತಂತೆ ಅಪೆಕ್ಸ್ ನ್ಯಾಯಾಲಯ ಸಿಬಿಐ ಮತ್ತು ಕೇಂದ್ರ ಟಿಲಿಕಾ ಖಾತೆ ಸಚಿವ ಎ.ರಾಜಾ ಅವರಿಗೆ ನೋಟಿಸ್ ಜಾರಿಮಾಡಿದೆ ಎಂದು ಮೂಲಗಳು ತಿಳಿಸಿವೆ.
2ಜಿ ತರಂಗಾಂತರಗಳ ಹಗರಣದ ತನಿಖೆಯ ಮೇಲ್ವಿಚಾರಣೆ ನಡೆಸುವಂತೆ ಅರ್ಜಿದಾರರೊಬ್ಬರು ಸಲ್ಲಿಸಿದ ಮನವಿಯನ್ನು ಕೈಗೆತ್ತಿಕೊಂಡ ಸರ್ವೋಚ್ಚ ನ್ಯಾಯಾಲಯ, 2ಜಿ ತರಂಗಾಂತರಗಳ ಹಂಚಿಕೆ ಕುರಿತಂತೆ ವಿವಾದ ಸೃಷ್ಠಿಗೆ ಮೂಲ ಕಾರಣಗಳೇನು ಎಂದು ಸಚಿವ ರಾಜಾಗೆ ನೋಟಿಸ್‌ನಲ್ಲಿ ಪ್ರಶ್ನಿಸಲಾಗಿದೆ.
ಮಾರುಕಟ್ಟೆ ದರಕ್ಕಿಂತ ಕಡಿಮೆ ದರದಲ್ಲಿ 2ಜಿ ತರಂಗಾಂತರಗಳನ್ನು ಹಂಚಿಕೆ ಮಾಡಲಾಗಿರುವುದರಿಂದ ಸರಕಾರಕ್ಕೆ ಭಾರಿ ನಷ್ಟವಾಗಿದ್ದು, ಬಹುಕೋಟಿ ಹಗರಣದ ಅವ್ಯವಹಾರವಾಗಿದೆ ಎನ್ನುವ ಆರೋಪವನ್ನು ಸಚಿವ ಎ.ರಾಜಾ ಎದುರಿಸುತ್ತಿದ್ದಾರೆ.
ನ್ಯಾಯಾಲಯ 10 ದಿನಗಳ ಕಾಲವಕಾಶ ನೀಡಿದ್ದು, ಸಿಬಿಐ ಮತ್ತು ಕೇಂದ್ರದ ಟೆಲಿಕಾಂ ಇಲಾಖೆಗೆ ಗಡುವಿನೊಳಗೆ ಉತ್ತರಿಸುವಂತೆ ಆದೇಶಿಸಿದೆ.
ಕೇಂದ್ರ ತನಿಖಾ ದಳ ಅನಾಮಧೇಯ ಅಧಿಕಾರಗಳ ವಿರುದ್ಧ ಎಫ್‌ಐಆರ್ ಸಲ್ಲಿಸಿದ ವರದಿಯನ್ನು ತರಾಟೆಗೆ ತೆಗೆದುಕೊಂಡ ನ್ಯಾಯಾಲಯ, ತನಿಖಾ ಸಂಸ್ಥೆಗಳು ಆರೋಪಿಗಳ ಹೆಸರುಗಳನ್ನು ವರದಿಯಲ್ಲಿ ಸಲ್ಲಿಸಬೇಕಿತ್ತು ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದೆ.