ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಈರುಳ್ಳಿ ರಫ್ತು ವಹಿವಾಟಿನಲ್ಲಿ ಶೇ.53ರಷ್ಟು ಕುಸಿತ (Export prices | Onion exports | Nafed | MEP)
Bookmark and Share Feedback Print
 
ಈರುಳ್ಳಿ ರಫ್ತು ದರ ಹೆಚ್ಚಳದಿಂದಾಗಿ ಸತತ ಐದನೇ ತಿಂಗಳು ರಫ್ತು ವಹಿವಾಟಿನಲ್ಲಿ ಇಳಿಕೆಯಾಗುತ್ತಿದ್ದು, ಪ್ರಸಕ್ತ ತಿಂಗಳ ವಹಿವಾಟಿನಲ್ಲಿ ಶೇ.53ರಷ್ಟು ಕುಸಿತವಾಗಿ 87,428 ಟನ್‌ಗಳಿಗೆ ತಲುಪಿದೆ ಎಂದು ವಹಿವಾಟಿನ ಮೂಲಗಳು ತಿಳಿಸಿವೆ.

ಕಳೆದ ವರ್ಷದ ಸೆಪ್ಟೆಂಬರ್ ತಿಂಗಳ ಅವಧಿಯಲ್ಲಿ ಈರುಳ್ಳಿ ವಹಿವಾಟು 1,86,144 ಟನ್‌ಗಳಿಗೆ ತಲುಪಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ ಮತ್ತು ಚೀನಾ ದೇಶಗಳು ಪ್ರತಿ ಟನ್ ಈರುಳ್ಳಿ ದರವನ್ನು 170-180 ಡಾಲರ್‌ಗಳಿಂದ 40-50 ಡಾಲರ್‍ಗಳಿಗೆ ಇಳಿಕೆಗೊಳಿಸಿವೆ. ಆದರೆ, ಭಾರಚತದ ಈರುಳ್ಳಿ ದರಗಳು ಪ್ರತಿ ಟನ್‌ಗೆ 220 ಡಾಲರ್‌ ರಫ್ತು ದರವಾಗಿದೆ ಎಂದು ಹಿರಿಯ ಅಧಿಕಾರಿಗಳು ವಿವರಣೆ ನೀಡಿದ್ದಾರೆ.

ಕೇಂದ್ರ ಸರಕಾರ ದೇಶಿಯ ಮಾರುಕಟ್ಟೆಯಲ್ಲಿ ದರ ಏರಿಕೆ ನಿಯಂತ್ರಿಸಲು, ಅಗಸ್ಟ್ ತಿಂಗಳ ಅವಧಿಯಲ್ಲಿ ಕನಿಷ್ಠ ರಫ್ತು ದರ 220 ಡಾಲರ್‌ಗಳಿಗೆ ನಿಗದಿಪಡಿಸಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ