2015ರಲ್ಲಿ ಪ್ರತಿಯೊಂದು ಗ್ರಾಮಗಳಿಗೆ ಬ್ಯಾಂಕ್ ಸೇವೆ:ಆರ್‌ಬಿಐ
ವಾರಣಾಸಿ, ಸೋಮವಾರ, 13 ಸೆಪ್ಟೆಂಬರ್ 2010( 17:37 IST )
ದೇಶದಲ್ಲಿರುವ ಪ್ರತಿಯೊಂದು ಗ್ರಾಮಗಳಿಗೆ ಮುಂಬರುವ 2015ರ ವೇಳೆಗೆ ಮೊಬೈಲ್ ಬ್ಯಾಂಕ್‌ಗಳ ಮೂಲಕ ಸೇವೆಗಳನ್ನು ಒದಗಿಸಲು ಯೋಜನೆಗಳನ್ನು ರೂಪಿಸಲಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಉಪಗೌವರ್ನರ್ ಕೆ.ಸಿ.ಚಕ್ರವರ್ತಿ ತಿಳಿಸಿದ್ದಾರೆ.
ಮುಂಬರುವ 5 ವರ್ಷಗಳಲ್ಲಿ ಗ್ರಾಮದ ಪ್ರತಿಯೊಬ್ಬ ವ್ಯಕ್ತಿಯನ್ನು ಮೊಬೈಲ್ ಬ್ಯಾಂಕ್‌ನ ಖಾತೆದಾರನಾಗಿಸಲು ಸೇರ್ಪಡೆಗೊಳಿಸಲಾಗುವುದು ಎಂದು ಚಕ್ರವರ್ತಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಪ್ರತ್ಯೇಕ ಬ್ಯಾಂಕ್‌ಗಳ ಅಧಿಕಾರಿಗಳನ್ನು ಹೊಂದಿದ ವಾಹನ ತಮ್ಮ ವ್ಯಾಪ್ತಿಗೆ ಬರುವ ಪ್ರತಿಯೊಂದು ಗ್ರಾಮಗಳ ಮನಮನೆಗಳಿಗೆ ತೆರಳಿ ಬ್ಯಾಂಕ್ ಸೌಲಭ್ಯಗಳನ್ನು ನೀಡಲಿದೆ ಎಂದು ಆರ್‌ಬಿಐ ಮೂಲಗಳು ತಿಳಿಸಿವೆ.
ಭಾರತೀಯ ರಿಸರ್ವ್ ಬ್ಯಾಂಕ್, ದೇಶದ ಪ್ರತಿಯೊಂದು ಗ್ರಾಮಗಳ ಸೂಕ್ತ ಸ್ಥಳದಲ್ಲಿ ಬ್ಯಾಂಕ್‌ನ ಶಾಖೆಯನ್ನು ತೆರೆಯಲು ರೋಡ್‌ಮ್ಯಾಪ್ ಸಿದ್ಧಪಡಿಸಿದೆ ಎಂದು ಆರ್‌ಬಿಐ ಅಧಿಕಾರಿಗಳು ತಿಳಿಸಿದ್ದಾರೆ.