ಟೆಲಿಕಾಂ: ಬಿಎಸ್‌ಎನ್‌ಎಲ್ ಹಿಂದಿಕ್ಕಿದ ಟಾಟಾ ಟೆಲಿ ಸರ್ವಿಸಸ್
ನವದೆಹಲಿ, ಸೋಮವಾರ, 13 ಸೆಪ್ಟೆಂಬರ್ 2010( 20:00 IST )
ಟಾಟಾ ಟೆಲಿಸರ್ವಿಸಸ್ 77 ಮಿಲಿಯನ್ ಬಳಕೆದಾರರನ್ನು ಹೊಂದುವ ಮೂಲಕ ಸರಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಹಿಂದಕ್ಕೆ ತಳ್ಳಿ ದೇಶದ ಪ್ರಮುಖ ನಾಲ್ಕು ಕಂಪೆನಿಗಳಲ್ಲಿ ಸ್ಥಾನಪಡೆದಿದೆ.
ಭಾರ್ತಿ ಏರ್‌ಟೆಲ್, ರಿಲಯನ್ಸ್ ಕಮ್ಯೂನಿಕೇಶನ್ಸ್, ವೋಡಾಫೋನ್ ನಂತರದ ನಾಲ್ಕನೇ ಸ್ಥಾನವನ್ನು ಟಾಟಾ ಟೆಲಿಸರ್ವಿಸಸ್ ಹೊಂದಿದೆ ಎಂದು ಟಾಟಾ ಟೆಲಿಸರ್ವಿಸಸ್ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.
ಟಾಟಾ ಟೆಲಿಸರ್ವಿಸಸ್, ಮೊಬೈಲ್ ದರಗಳಲ್ಲಿ ಪ್ರತಿ ಸೆಕೆಂಡಿಗೆ ಪರಿಚಯಿಸಿದ ಮೊದಲ ಟೆಲಿಕಾಂ ಕಂಪೆನಿಯಾಗಿದ್ದು,ಇತರ ಕಂಪೆನಿಗಳು ಕೂಡಾ ಟಾಟಾ ಕಂಪೆನಿಯನ್ನು ಹಿಂಬಾಲಿಸಿವೆ.
ಟಾಟಾ ಟೆಲಿಸರ್ವಿಸಸ್, ಜಿಎಸ್‌ಎಂ ಮತ್ತು ಸಿಡಿಎಂಎ ಉಭಯ ತಂತ್ರಜ್ಞಾನಗಳ ಸೇವೆಗಳನ್ನು ದೇಶಾದ್ಯಂತ ಬಿಡುಗಡೆ ಮಾಡಿ ಟೆಲಿಕಾಂ ವಲಯದಲ್ಲಿ ತನ್ನ ಅಸ್ಥಿತ್ವವನ್ನು ಸಾಬೀತುಪಡಿಸಿತ್ತು.