ಸರಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ಡೀಲರ್‌ಗಳ ದಲ್ಲಾಳಿ ಮೊತ್ತವನ್ನು ಹೆಚ್ಚಿಸಲು ನಿರಾಕರಿಸಿದ್ದರಿಂದ, ಪೆಟ್ರೋಲ್ ಪಂಪ್‌ಗಳ ಮಾಲೀಕರು ಸೆಪ್ಟೆಂಬರ್ 20ರಿಂದ ದೇಶಾದ್ಯಂತ ಅನಿರ್ಧಿಷ್ಠಾವಧಿಯವರೆಗೆ ಬಂದ್ ಕರೆ ನೀಡಲು ನಿರ್ಧರಿಸಿವೆ ಎಂದು ಮೂಲಗಳು ತಿಳಿಸಿವೆ.
ದೇಶದಲ್ಲಿರುವ 38,000 ಪೆಟ್ರೋಲ್ ಪಂಪ್‌ಗಳನ್ನು ಪ್ರತಿನಿಧಿಸುವ ಆಲ್ ಇಂಡಿಯಾ ಪೆಟ್ರೋಲಿಯಂ ಟ್ರೇಡರ್ಸ್ ಫೆಡರೇಶನ್, ಪ್ರತಿ ಲೀಟರ್‌ಗೆ ನೀಡುತ್ತಿರುವ ಸ್ಥಿರ ದರದ ಬದಲಿಗೆ ಡೀಲರ್‌ಗಳ ದಲ್ಲಾಳಿಯ ಶೇಕಡಾವಾರು ಮೊತ್ತವನ್ನು ಹೆಚ್ಚಿಸುವಂತೆ ಒತ್ತಾಯಿಸಿದೆ.
ಕೇಂದ್ರ ಸರಕಾರ ಪೆಟ್ರೋಲ್ ದರ ಏರಿಕೆ ನಿಯಂತ್ರಣದಿಂದ ಮುಕ್ತಗೊಳಿಸಿದ ನಂತರ, ಪೆಟ್ರೋಲ್ ಪಂಪ್‌ಗಳ ಮಾಲೀಕರು ಡೀಲರ್‌ಗಳ ದಲ್ಲಾಳಿ ಹಣವನ್ನು ಹೆಚ್ಚಿಸುವಂತೆ ಒತ್ತಾಯಿಸಿವೆ.
ಕಳೆದ ವಾರ ಇಂಧನ ಸಚಿವಾಲಯ, ಡೀಲರ್‌ಗಳ ದಲ್ಲಾಳಿ ಮೊತ್ತವನ್ನು ಪ್ರತಿ ಕೀಲೋ ಲೀಟರ್‌ಗೆ 1,218 ರೂಪಾಯಿಗಳಿಂದ 1,125 ರೂಪಾಯಿಗಳಿಗೆ ಏರಿಕೆ ಘೋಷಿಸಿತ್ತು. ಅದರಂತೆ ಡೀಸೆಲ್ ದಲ್ಲಾಳಿ ಮೊತ್ತವನ್ನು 673 ರೂಪಾಯಿಗಳಿಂದ 757 ರೂಪಾಯಿಗಳಿಗೆ ಏರಿಕೆಯಾಗಿತ್ತು.