2ಜಿ ತರಂಗಾಂತರಗಳ ಹಂಚಿಕೆ ಅವ್ಯವಹಾರ ಕುರಿತಂತೆ ದೇಶದ ಅಪೆಕ್ಸ್ ನ್ಯಾಯಾಲಯ ಕೇಂದ್ರೀಯ ತನಿಖಾ ದಳ (ಸಿಬಿಐ) ಹಾಗೂ ಕೇಂದ್ರ ಟೆಲಿಕಾಂ ಸಚಿವ ಎ.ರಾಜಾ ಅವರಿಗೆ ನೋಟಿಸ್ ಜಾರಿ ಮಾಡಿದ ಒಂದು ದಿನದ ನಂತರ ಸಚಿವ ರಾಜಾ ತಮ್ಮ ಮೌನವನ್ನು ಮುರಿದಿದ್ದಾರೆ.
2ಜಿ ತರಂಗಾಂತರಗಳ ಹಂಚಿಕೆ ಅವ್ಯವಹಾರ ಕುರಿತಂತೆ ನನ್ನ ವಿರುದ್ಧ ಆರೋಪಗಳಿವೆ. ಕಾನೂನು ತನ್ನ ಕಾರ್ಯ ಮುಂದುವರಿಸಲಿದೆ ಎಂದು ಹೇಳಿದ್ದಾರೆ.
ಅಪೆಕ್ಸ್ ನ್ಯಾಯಾಲಯ ನೀಡಿದ ನೋಟಿಸ್ ಕುರಿತಂತೆ ಪ್ರತಿ ಕ್ರಿಯೆ ನೀಡಿದ ಸಚಿವ.ರಾಜಾ, ಅಪೆಕ್ಸ್ ನ್ಯಾಯಾಲಯದ ಆದೇಶದಲಲ್ಲಿ ಮಧ್ಯೆ ಪ್ರವೇಶಿಸುವುದಿಲ್ಲ.ತನಿಖೆಯನ್ನು ಅಂತ್ಯಗೊಳಿಸಿದಲ್ಲಿ ಸತ್ಯ ಸಂಗತಿ ಬಹಿರಂಗವಾಗಲಿದೆ ಎಂದರು.
ದೇಶದ ಸರ್ವೋಚ್ಚ ನ್ಯಾಯಾಲಯ ಸಚಿವ ರಾಜಾಗೆ ನೋಟಿಸ್ ಜಾರಿ ಮಾಡಿ, 2ಜಿ ತರಂಗಾಂತರಗಳ ಹಂಚಿಕೆಯ ಅವ್ಯವಹಾರಗಳಿಂದ ಸರಕಾರಕ್ಕೆ ಸುಮಾರು 70,000 ಕೋಟಿ ರೂಪಾಯಿ ನಷ್ಟವಾಗಿದೆ ಎನ್ನುವ ಬಗ್ಗೆ 10 ದಿನಗಳೊಳಗಾಗಿ ಉತ್ತರಿಸುವಂತೆ ಆದೇಶಿಸಿದೆ.
ಕಳೆದ ವರ್ಷದ ಅಕ್ಟೋಬರ್ ತಿಂಗಳಿನಿಂದ ಸಿಬಿಐ ಪ್ರಕರಣದ ತನಿಖೆ ನಡೆಸುತ್ತಿದ್ದು, ರಾಜಾ ಸಂಪುಟ ಸಚಿವರಾಗಿದ್ದರಿಂದ ತನಿಖೆ ಆಮೆಗತಿಯಲ್ಲಿ ಸಾಗಿದೆ ಎಂದು ಮನವಿದಾರರು ಅಸಮಧಾನ ವ್ಯಕ್ತಪಡಿಸಿದ್ದಾರೆ.