ಬ್ಲ್ಯಾಕ್ ಬೆರ್ರಿ ಭದ್ರತಾ ಸಮಸ್ಯೆ ಶೀಘ್ರ ಇತ್ಯರ್ಥ:ಸರಕಾರ
ನವದೆಹಲಿ, ಮಂಗಳವಾರ, 14 ಸೆಪ್ಟೆಂಬರ್ 2010( 18:10 IST )
ರಿಸರ್ಚ್ ಇನ್ ಮೋಶನ್ ಉತ್ಪಾದನೆಯಾದ ಬ್ಲ್ಯಾಕ್ ಬೆರ್ರಿ ಮೊಬೈಲ್ ಫೋನ್‌ನ ಭಧ್ರತಾ ಸಮಸ್ಯೆಗಳು ಶೀಘ್ರದಲ್ಲಿ ಪರಿಹಾರವಾಗುವ ಸಾಧ್ಯತೆಗಳಿವೆ ಎಂದು ಕೇಂದ್ರದ ಟೆಲಿಕಾಂ ಸಚಿವ ಎ.ರಾಜಾ ಹೇಳಿದ್ದಾರೆ.
ಬ್ಲ್ಯಾಕ್ ಬೆರ್ರಿ ಸೇವೆಗಳನ್ನು ಬಳಸಿಕೊಂಡು ಉಗ್ರರು ಭಾರತದ ಮೇಲೆ ದಾಳಿ ನಡೆಸುವ ಕಳವಳಗಳಿಂದಾಗಿ ಸರಕಾರ, ಬ್ಲ್ಯಾಕ್ ಬೆರ್ರಿ ಕೆಲ ಸೇವೆಗಳಿಗೆ ತಡೆಹಿಡಿಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೇಂದ್ರ ಗೃಹಸಚಿವ ಪಿ.ಚಿದಂಬರಂ ಮಾತನಾಡಿ, ಮುಂಬರುವ 60 ದಿನಗಳೊಳಗಾಗಿ ಬ್ಲ್ಯಾಕ್‌ಬೆರ್ರಿ ಸಮಸ್ಯೆಗಳನ್ನು ಪರಿಹರಿಸಲು ಹಲವು ಪ್ರಯತ್ನಗಳನ್ನು ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.