ಹಣದುಬ್ಬರ ದರ ಅಗಸ್ಟ್ ತಿಂಗಳಾಂತ್ಯಕ್ಕೆ ಶೇ.1.3.ರಷ್ಟು ಕುಸಿತ ಕಂಡು ಏಳಉ ತಿಂಗಳ ಗರಿಷ್ಠ ಶೇ.8.5ಕ್ಕೆ ಇಳಿಕೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ಹಣದುಬ್ಬರ ದರದಲ್ಲಿ ಇನ್ನೂ ಹೆಚ್ಚಳವಾಗಿದ್ದರಿಂದ ಆರ್‌ಬಿಐ ಸೆಪ್ಟೆಂಬರ್ 16 ರಂದು ನಡೆಯಲಿರುವ ಆರ್ಥಿಕ ಪರಿಷ್ಕರಣ ಸಭೆಯಲ್ಲಿ ಮತ್ತಷ್ಟು ರೆಪೋ ದರಗಳನ್ನು ಹೆಚ್ಚಿಸುವ ಅಗತ್ಯವಿದೆ ಎಂದು ಕೇಂದ್ರ ವಿತ್ತಖಾತೆ ಸಚಿವ ಪ್ರಣಬ್ ಮುಖರ್ಜಿ ತಿಳಿಸಿದ್ದಾರೆ.
ಮುಂಗಾರು ಮಳೆ ಹೆಚ್ಚಳ ಹಾಗೂ ಇತರ ಕೆಲ ಕಾರಣಗಳಿಂದಾಗಿ ಆಹಾರ ದರಗಳಲ್ಲಿ ಏರಿಕೆಯಾಗಿದ್ದರಿಂದ ಹಣದುಬ್ಬರ ಒತ್ತಡದಲ್ಲಿ ಹೆಚ್ಚಳವಾಗಿದೆ. ಆರ್‌ಬಿಐ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹಣದುಬ್ಬರ ದರ ನಿಯಂತ್ರಣಕ್ಕಾಗಿ ಸರಕಾರ ಹಾಗೂ ಆರ್‌ಬಿಐ ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿದ್ದು, ಹಣದುಬ್ಬರ ದರ ಇಳಿಕೆಯಾಗಲಿದೆ ಎಂದು ಕೇಂದ್ರ ವಾಣಿಜ್ಯ ಖಾತೆ ಸಚಿವ ಆನಂದ್ ಶರ್ಮಾ ಹೇಳಿದ್ದಾರೆ.