ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ದೈನಿಕ್ ಭಾಸ್ಕರ್‌ನಿಂದ ಬಿಎಚ್‌ಇಎಲ್‌ಗೆ 2,665 ಕೋಟಿ ರೂ, ಗುತ್ತಿಗೆ (BHEL | Power plant | Dainik Bhaskar Power Limited | Power project)
Bookmark and Share Feedback Print
 
ವಿದ್ಯುತ್ ಉಪಕರಣ ತಯಾರಿಕೆ ಸಂಸ್ಥೆಯಾದ ಬಿಎಚ್‌ಇಎಲ್, ಕಲ್ಲಿದ್ದಲು ಆಧಾರಿತ 1200 ಮೆಗಾ ವ್ಯಾಟ್ ವಿದ್ಯುತ ಘಟಕ ಸ್ಥಾಪನೆಗಾಗಿ ದೈನಿಕ್ ಭಾಸ್ಕರ್‌ ಪವರ್ ಲಿಮಿಟೆಡ್‌ನಿಂದ 2,665 ಕೋಟಿ ರೂಪಾಯಿಗಳ ಗುತ್ತಿಗೆಯನ್ನು ಪಡೆದಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ಗುತ್ತಿಗೆಯ ಪ್ರಕಾರ, ಘಟಕದ ವಿನ್ಯಾಸ, ಇಂಜಿನಿಯರಿಂಗ್ ಉಪಕರಣಗಳ ಸರಬರಾಜು ಬಾಯ್ಲರ್‌ಘಲು ಟರ್ಬೈನ್‌‌ ಜನರೇಟರುಗಳ ಸರಬರಾಜು ಸೇರಿದೆ ಎಂದು ಬಿಎಚ್‌ಇಎಲ್ ಕಂಪೆನಿ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ತಿರುಚಿರಾಪಳ್ಳಿಯಲ್ಲಿರುವ ಬಿಎಚ್‌ಇಎಲ್ ಕಾಂಪ್ಲೆಕ್ಸ್, ಬಾಯ್ಲರ್‌ಗಳ ಉತ್ಪಾದನೆಯ ಹೊಣೆಯನ್ನು ವಹಿಸಿಕೊಳ್ಳಲಿದೆ. ಬೆಂಗಳೂರಿನಲ್ಲಿರುವ ಘಟಕಕ್ಕೆ ನಿಯಂತ್ರಣ ವ್ಯವಸ್ಥೆಯನ್ನು ನೀಡಲಾಗಿದೆ. ರಾಣಿಪೇಟ್‌ನಲ್ಲಿರುವ ಘಟಕದಿಂದ ಕೆಲ ವಸ್ತುಗಳ ಉತ್ಪಾದನೆಯ ಜವಾಬ್ದಾರಿಯನ್ನು ಹೊರಲಿದೆ ಎಂದು ಬಿಎಚ್‌ಇಎಲ್ ಅಧಿಕಾರಿಗಳು ತಿಳಿಸಿದ್ದಾರೆ.

2009-10ರ ಅವಧಿಯಲ್ಲಿ ಖಾಸಗಿ ವಿದ್ಯುತ್ ಕಂಪೆನಿಗಳ ಉತ್ಪಾದಕರಿಂದ 16,489ಮೆಗಾ ವ್ಯಾಟ್‌ ವಿದ್ಯುತ್ ಉತ್ಪಾದನೆಗಾಗಿ ಶೇ.90ರಷ್ಟು ಬೇಡಿಕೆಗಳು ಬಂದಿವೆ ಎಂದು ಬಿಎಚ್‌ಇಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ