ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಬೆಳ್ಳಿ ದರದಲ್ಲಿ ದಾಖಲೆಯ ಏರಿಕೆ, ಚಿನ್ನದ ದರವು ದುಬಾರಿ (Silver prices | Industrial | Stockists | Global trend | Gold prices)
Bookmark and Share Feedback Print
 
ಜಾಗತಿಕ ಸ್ಥಿರವಹಿವಾಟಿನಿಂದಾಗಿ ಕೈಗಾರಿಕೋದ್ಯಮ ಕ್ಷೇತ್ರದ ಬೇಡಿಕೆಯಲ್ಲಿ ಹೆಚ್ಚಳವಾಗಿದ್ದರಿಂದ, ಬೆಳ್ಳಿಯ ದರದಲ್ಲಿ ದಾಖಲೆಯ ಏರಿಕೆಯಾಗಿ ಪ್ರತಿ ಕೆಜಿಗೆ 32,030 ರೂಪಾಯಿಗಳಿಗೆ ತಲುಪಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬೆಳ್ಳಿಯ ದರ 30 ತಿಂಗಳ ಗರಿಷ್ಠ ಏರಿಕೆ ಕಂಡಿದೆ ಎನ್ನುವ ವರದಿಗಳ ಹಿನ್ನಲೆಯಲ್ಲಿ ದೇಶಿಯ ಮಾರುಕಟ್ಟೆಗಳಲ್ಲಿ ಬೆಳ್ಳಿಯ ದರದಲ್ಲಿ ಪ್ರತಿ ಕೆಜಿಗೆ 405 ರೂಪಾಯಿಗಳ ಏರಿಕೆಯಾಗಿ 32,030 ರೂಪಾಯಿಗಳಿಗೆ ತಲುಪಿದೆ.

ಆಭರಣಗಳ ಹಾಗೂ ನಾಣ್ಯಗಳ ತಯಾರಕರು ಸೀಜನ್ ಬೇಡಿಕೆಯನ್ನು ಪೂರೈಸಲು ಬೆಳ್ಳಿಯ ಖರೀದಿಯಲ್ಲಿ ತೊಡಗಿದ್ದರಿಂದ, ಬೆಳ್ಳಿಯ ದರದಲ್ಲಿ ಏರಿಕೆಯಾಗಿದೆ ಎಂದು ಚಿನಿವಾರಪೇಟೆಯ ಮೂಲಗಳು ತಿಳಿಸಿವೆ.

ಚಿನ್ನಾಭರಣಗಳ ತಯಾರಕರಿಂದ ಚಿನ್ನದ ಖರೀದಿಯಲ್ಲಿ ಹೆಚ್ಚಳವಾಗಿದ್ದರಿಂದ ಚಿನ್ನದ ದರದಲ್ಲಿ 60 ರೂಪಾಯಿಗಳ ಏರಿಕೆಯಾಗಿ 19,200 ರೂಪಾಯಿಗಳಿಗೆ ತಲುಪಿದೆ.

ಸಾಗರೋತ್ತರ ಮಾರುಕಟ್ಟೆಯಲ್ಲಿ ಚಿನ್ನದ ದರ ಪ್ರತಿ ಔನ್ಸ್‌ಗೆ 9.52 ಡಾಲರ್‌ಗಳ ಏರಿಕೆಯಾಗಿ, 1,255.13 ಡಾಲರ್‌ಗಳಿಗೆ ತಲುಪಿದೆ.
ಸಂಬಂಧಿತ ಮಾಹಿತಿ ಹುಡುಕಿ