ಅಮೆರಿಕದ ಒಹಿಯೊ ರಾಜ್ಯ ಹೊರಗುತ್ತಿಗೆ ನಿಷೇಧ ಹೇರಿದ್ದರಿಂದ, ಭಾರತ-ಅಮೆರಿಕ ಬಾಂಧವ್ಯಕ್ಕೆ ಧಕ್ಕೆಯಾಗುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಮುಖ್ಯ ತಂತ್ರಜ್ಞಾನ ಸಲಹೆಗಾರ ಅನೀಶ್ ಚೋಪ್ರಾ ಹೇಳಿದ್ದಾರೆ.
ಅಮೆರಿಕದಲ್ಲಿ ನವೆಂಬರ್ ತಿಂಗಳಲ್ಲಿ ಚುನಾವಣೆಗಳು ನಡೆಯಲಿರುವುದರಿಂದ, ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ನಿಲುವು ರಾಜಕೀಯ ತಿರುವು ಪಡೆದುಕೊಂಡಿದೆ.
ಹೊರಗುತ್ತಿಗೆ ನಿಷೇಧದಿಂದ ಎದುರಾಗಿರುವ ಸಮಸ್ಯೆಗಳು ಚರ್ಚೆಯೊಂದಿಗೆ ಅಂತ್ಯಗೊಳ್ಳುವ ವಿಶ್ವಾಸವಿದೆ. ವಹಿವಾಟಿನ ಉದ್ಯಮಿಗಳು ಫಲಪ್ರದವಾದ ಮಾತುಕತೆಗಳನ್ನು ನಡೆಸಿದಲ್ಲಿ ಪರಿಹಾರ ದೊರೆಯಲಿದೆ ಎಂದು ಚೋಪ್ರಾ ಹೇಳಿದ್ದಾರೆ.
ಒಹಿಯೊ ರಾಜ್ಯ ಸರಕಾರದ ನಿರ್ಧಾರ ಹಾಗೂ ಅಧ್ಯಕ್ಷ ಬರಾಕ್ ಒಬಾಮಾ ಹೊರಗುತ್ತಿಗೆ ನಿಷೇಧಕ್ಕೆ ಹೆಚ್ಚಿನ ಆಸಕ್ತಿ ತೋರಿರುವುದು ಭಾರತದ ಮಾಹಿತಿ ತಂತ್ರಜ್ಞಾನ ವಲಯದಲ್ಲಿ ಹೊಸತೊಂದು ಬಿಕ್ಕಟ್ಟು ಎದುರಾಗಿದೆ ಎಂದು ಐಟಿ ಮೂಲಗಳು ಅಸಮಧಾನ ವ್ಯಕ್ತಪಡಿಸಿವೆ.
ದೇಶದಲ್ಲಿ ಉದ್ಯೋಗಗಳನ್ನು ಸೃಷ್ಟಿಸುವ ಕಂಪೆನಿಗಳಿಗೆ ತೆರಿಗೆ ವಿನಾಯಿತಿಗಳನ್ನು ನೀಡುವುದಾಗಿ, ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಘೋಷಣೆಯಿಂದ ಭಾರತೀಯ ಕಂಪೆನಿಗಳು ಆತಂಕಗೊಂಡಿವೆ.