ಸಾಗರೋತ್ತರ ಮಾರುಕಟ್ಟೆಗಳ ಚಿನ್ನದ ವಹಿವಾಟಿನಲ್ಲಿ ಚೇತರಿಕೆಯಾಗಿದ್ದರಿಂದ,ದೇಶಿಯ ಮಾರುಕಟ್ಟೆಯಲ್ಲಿ ಚಿನ್ನದ ದರ ಪ್ರತಿ 10ಗ್ರಾಂಗೆ 19,250 ರೂಪಾಯಿಗಳಿಗೆ ತಲುಪಿದೆ.
ಅಮೆರಿಕದ ಬರಾಕ್ ಒಬಾಮಾ ನೇತೃತ್ವದ ಸರಕಾರ, ವಹಿವಾಟಿನ ನೀತಿಗಳಲ್ಲಿ ಸುಧಾರಣೆ ತರಲಿದೆ ಎನ್ನುವ ವರದಿಗಳ ಹಿನ್ನೆಲೆಯಲ್ಲಿ ಸಾಗರೋತ್ತರ ಮಾರುಕಟ್ಟೆಯಲ್ಲಿ ಚಿನ್ನದ ವಹಿವಾಟಿನಲ್ಲಿ ಭಾರಿ ಚೇತರಿಕೆಯಾಗಿದೆ.
ಸಾಗರೋತ್ತರ ಮಾರುಕಟ್ಟೆಯಲ್ಲಿ ಚಿನ್ನದ ದರ ಪ್ರತಿ ಔನ್ಸ್‌ಗೆ 1,274.75 ಡಾಲರ್‌ಗಳಿಗೆ ತಲುಪಿದೆ. ಮುಂಬರುವ ದಿನಗಳಲ್ಲಿ ಪ್ರತಿ ಔನ್ಸ್‌ಗೆ 1,300 ಡಾಲರ್‌ಗಳಿಗೆ ತಲುಪುವ ಸಾಧ್ಯತೆಗಳಿವೆ ಎಂದು ಮಾರುಕಟ್ಟೆಯ ಡೀಲರ್‌ಗಳು ತಿಳಿಸಿದ್ದಾರೆ.