ದೇಶದ ಅಭಿವೃದ್ಧಿ ದರವನ್ನು ಚೇತರಿಕೆಗೊಳಿಸಲು ಎಲ್ಲಾ ಕ್ಷೇತ್ರಗಳ ಆರ್ಥಿಕತೆಯ ಉತ್ಪಾದನೆಯನ್ನು ಹೆಚ್ಚಳಗೊಳಿಸುವ ಅಗತ್ಯವಿದೆ ಎಂದು ಪ್ರಧಾನಿ ಡಾ.ಮನಮೋಹನ್ ಸಿಂಗ್ ಹೇಳಿದ್ದಾರೆ.
ಆರ್ಥಿಕತೆ ಕೆಲ ವರ್ಷಗಳಿಂದ ಚೇತರಿಕೆ ಕಂಡಿದ್ದು,ಅಭಿವೃದ್ಧಿ ದರದಲ್ಲಿ ಏರಿಕೆಯಾಗಿದೆ.ಮುಂಬರುವ ದಿನಗಳಲ್ಲಿ ಮತ್ತಷ್ಟು ಚೇತರಿಕೆಯಾಗುವ ಸಾಧ್ಯತೆಗಳಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ದೇಶದ ಜಿಡಿಪಿ ದರವನ್ನು ಶೇ.9ರಿಂದ ಶೇ.10ಕ್ಕೆ ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕಾಗಿದೆ.ಕೆಲ ಕುಂದು ಕೊರತೆಗಳನ್ನು ತೆಗೆದುಹಾಕಿ, ಆತ್ಮವಿಶ್ವಾಸ ಹೆಚ್ಚಿಸಬೇಕಾಗಿದೆ ಎಂದು ಪ್ರಧಾನಿ ಮನಮೋಹನ್ ಸಿಂಗ್ ಶ್ರಮದಾನ ಪ್ರಶಸ್ತಿ ಸಮಾರಂಭದಲ್ಲಿ ತಿಳಿಸಿದ್ದಾರೆ.