ಕಳೆದ ತಿಂಗಳ ಅವಧಿಗೆ ಹೋಲಿಸಿದಲ್ಲಿ ಅಗಸ್ಟ್ ತಿಂಗಳ ರಫ್ತು ವಹಿವಾಟಿನಲ್ಲಿ ಶೇ.22.5ರಷ್ಟು ಏರಿಕೆಯಾಗಿ 16.64 ಬಿಲಿಯನ್ ಡಾಲರ್‌ಗಳಿಗೆ ತಲುಪಿದೆ ಎಂದು ವಾಣಿಜ್ಯ ಸಚಿವಾಲಯದ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.
ಅಗಸ್ಟ್ ತಿಂಗಳ ಅವಧಿಯಲ್ಲಿ ಅಮುದು ವಹಿವಾಟಿನಲ್ಲಿ ಕೂಡಾ ಶೇ.32.2ರಷ್ಟು ಏರಿಕೆಯಾಗಿ 29.7 ಬಿಲಿಯನ್ ಡಾಲರ್‌ಗಳಿಗೆ ತಲುಪಿದೆ ಎಂದು ವಾಣಿಜ್ಯ ಸಚಿವಾಲಯದ ಕಾರ್ಯದರ್ಶಿ ರಾಹುಲ್ ಖುಲ್ಲರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
2009ರ ರಫ್ತು ವಹಿವಾಟಿಗೆ ಹೋಲಿಸಿದಲ್ಲಿ, ಪ್ರಸಕ್ತ ವರ್ಷದ ಆರಂಭಿಕ ಏಳು ತಿಂಗಳುಗಳ ಅವಧಿಯಲ್ಲಿ ನಿಧಾನಗತಿಯಾಗಿದೆ. ಆದರೆ, ಮುಂಬರುವ ತಿಂಗಳುಗಳ ಅವಧಿಯಲ್ಲಿ ರಫ್ತು ವಹಿವಾಟು ಚೇತರಿಕೆಯಾಗುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ.
ವಾರ್ಷಿಕ ಆಧಾರದನ್ವಯ ಏಪ್ರಿಲ್-ಅಗಸ್ಟ್ ತಿಂಗಳ ಅವಧಿಯಲ್ಲಿ ರಫ್ತು ವಹಿವಾಟಿನಲ್ಲಿ ಶೇ.28.6ರಷ್ಟು ಏರಿಕೆಯಾಗಿ, 85.27 ಬಿಲಿಯನ್ ಡಾಲರ್‌ಗಳಿಗೆ ತಲುಪಿದೆ.
ಏಪ್ರಿಲ್-ಅಗಸ್ಟ್ ತಿಂಗಳ ಅವಧಿಯ ಅಮುದು ವಹಿವಾಟಿನಲ್ಲಿ ಶೇ.33.1ರಷ್ಟು ಏರಿಕೆಯಾಗಿದ್ದು, 141.89 ಬಿಲಿಯನ್ ಡಾಲರ್‌ಗಳಿಗೆ ತಲುಪಿದೆ.