ಚಿನ್ನದ ದರ ಏರಿಕೆ ನಿರಂತರ ದಾಖಲೆಯತ್ತ ಮುಂದುವರಿದಿದೆ.ಇಂದಿನ ವಹಿವಾಟಿನಲ್ಲಿ ಪ್ರತಿ 10ಗ್ರಾಂ ಚಿನ್ನದ ದರದಲ್ಲಿ 300 ರೂಪಾಯಿಗಳ ಏರಿಕೆಯಾಗಿ 19,500 ರೂಪಾಯಿಗಳಿಗೆ ತಲುಪಿದೆ.
ಬೆಳ್ಳಿಯ ದರದಲ್ಲಿ ಕೂಡಾ ದಾಖಲೆಯ ಏರಿಕೆಯಾಗಿದ್ದು, ಪ್ರತಿ ಕೆಜಿಗೆ 370 ರೂಪಾಯಿಗಳ ಏರಿಕೆ ಕಂಡು 32,400 ರೂಪಾಯಿಗಳಿಗೆ ತಲುಪಿದೆ.
ಹಬ್ಬದ ಹಾಗೂ ಮದುವೆ ಸೀಜನ್ ಹಿನ್ನೆಲೆಯಲ್ಲಿ, ಚಿನ್ನದ ಖರೀದಿಯಲ್ಲಿ ಏರಿಕೆಯಾಗಿದೆ ಎಂದು ಮಾರುಕಟ್ಟೆಯ ಡೀಲರ್‌ಗಳು ತಿಳಿಸಿದ್ದಾರೆ.
ಸಾಮಾನ್ಯವಾಗಿ ಚಿನ್ನದ ಖರೀದಿ ರಕ್ಷಾ ಬಂಧನ ಹಬ್ಬದಿಂದ ದಾಂತೆರಸ್ ಹಬ್ಬದವರೆಗೆ ಏರಿಕೆಯಾಗಿರುತ್ತದೆ. ಆದರೆ, ಪ್ರಸಕ್ತ ವರ್ಷದ ಅವದಿಯಲ್ಲಿ ಚಿನ್ನದ ದರ ಏರಿಕೆ ದಾಖಲೆಯತ್ತ ಸಾಗುತ್ತಿದೆ.
ಸಾಗರೋತ್ತರ ಮಾರುಕಟ್ಟೆಯಲ್ಲಿ ಚಿನ್ನದ ದರ ಪ್ರತಿ ಔನ್ಸ್‌ಗೆ ದಾಖಲೆಯ ಏರಿಕೆ ಕಂಡು 1,276 ಡಾಲರ್‌ಗಳಿಗೆ ತಲುಪಿದೆ. ಬೆಳ್ಳಿಯ ದರದಲ್ಲಿ ಕೂಡಾ 20.53 ಡಾಲರ್‌ಗಳ ಏರಿಕೆಯಾಗಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.