ಟೆಲಿಕಾಂ ಕಂಪೆನಿಗಳ ದರ ಸಮರ ಮುಂದುವರಿದಿದೆ. ಇದೀಗ ನೂತನ ಟೆಲಿಕಾಂ ಕಂಪೆನಿಯಾದ ಯುನಿನಾರ್, ಅಗಸ್ಟ್ ತಿಂಗಳ ಅವಧಿಯಲ್ಲಿ 2.2 ಮಿಲಿಯನ್ ಗ್ರಾಹಕರನ್ನು ಸೇರ್ಪಡೆಗೊಳಿಸಿದ್ದು, ಒಟ್ಟು 9.1 ಮಿಲಿಯನ್ ಗ್ರಾಹಕರನ್ನು ಹೊಂದಿದಂತಾಗಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
ಕಳೆದ ಡಿಸೆಂಬರ್ ತಿಂಗಳ ಅವಧಿಯಲ್ಲಿ ಸೇವೆಗಳನ್ನು ಆರಂಭಿಸಿದ ಯುನಿನಾರ್, ಕಳೆದ ಅಗಸ್ಟ್ ತಿಂಗಳ ಅವಧಿಯಲ್ಲಿ ಗರಿಷ್ಠ ಸಂಖ್ಯೆಯ ಗ್ರಾಹಕರನ್ನು ಸೇರ್ಪಡೆಗೊಳಿಸಿದಂತಾಗಿದೆ ಎಂದು ಕಂಪೆನಿ ಹೊರಡಿಸಿದ ಪ್ರಕಟಣೆಯಲ್ಲಿ ಬಹಿರಂಗಪಡಿಸಿದೆ.
ಯುನಿನಾರ್ ಟೆಲಿಕಾಂ ಕಂಪನಿ ದೇಶದ 22 ವಲಯಗಳಲ್ಲಿ ಕೇವಲ13 ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಕೆಲವೇ ತಿಂಗಳುಗಳಲ್ಲಿ ಉತ್ತಮ ಸಾಧನೆ ನಾಡಿದ್ದು, ಸೂಕ್ತ ದಿಕ್ಕಿನಲ್ಲಿ ಸಾಗುತ್ತಿದ್ದೇವೆ ಎನ್ನುವುದಕ್ಕೆ ಸಾಕ್ಷಿಯಾಗಿದೆ ಎಂದು ಕಂಪೆನಿ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.
ಇತ್ತೀಚೆಗೆ, ಯುನಿನಾರ್ ಕಂಪೆನಿ ಪ್ರತಿ ಕರೆಗೆ ಶೇ.60ರಷ್ಟು ವಿನಾಯಿತಿಯನ್ನು ನೀಡಿದೆ.ದೇಶದ ಟೆಲಿಕಾಂ ಮಾರುಕಟ್ಟೆಯಲ್ಲಿ ಶೇ8ರಷ್ಟು ಪಾಲನ್ನು ಹೊಂದುವ ಗುರಿಯಿದೆ. ಜಿಎಸ್‌ಎಂ ಮೊಬೈಲ್ ಕ್ಷೇತ್ರದಲ್ಲಿ 481 ಮಿಲಿಯನ್ ಗ್ರಾಹರನ್ನು ಹೊಂದಿದೆ ಕಂಪೆನಿ ಮಾಹಿತಿ ನೀಡಿದೆ.