ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಹೆದ್ದಾರಿ ಯೋಜನೆಗಳಲ್ಲಿ ಹೂಡಿಕೆಗೆ ಚೀನಾಗೆ ಅಹ್ವಾನ: ನಾಥ್ (Highway projects | Chinese investment)
Bookmark and Share Feedback Print
 
ದೇಶದ ಮೂಲಸೌಕರ್ಯ ಕ್ಷೇತ್ರಗಳಲ್ಲಿ ಹೂಡಿಕೆಗೆ ಬೃಹತ್ ಅವಕಾಶಗಳಿದ್ದು, ಚೀನಾ ಕಂಪೆನಿಗಳು ಹೂಡಿಕೆ ಮಾಡುವಂತೆ ಕೇಂದ್ರ ಸಚಿವ ಕಮಲ್‌ನಾಥ್ ಅಹ್ವಾನ ನೀಡಿದ್ದಾರೆ.

ಕೇಂದ್ರ ಸರಕಾರ ಜಮ್ಮು ಕಾಶ್ಮಿರ ಸೇರಿದಂತೆ ಇತರ ಹಲವು ಭಾಗಗಳ ಹೆದ್ದಾರಿ ಯೋಜನೆಗಳಲ್ಲಿ ಹೂಡಿಕೆ ಮಾಡಲು ನಿರ್ಧರಿಸಿದ್ದು, ಚೀನಾದ ಕಂಪೆನಿಗಳು ಕೂಡಾ ಪಾಲ್ಗೊಳ್ಳುವಂತೆ ಕರೆ ನೀಡಿದರು.

ದೇಶದ ರಸ್ತೆ ನಿರ್ಮಾಣ ಕಂಪೆನಿಗಳಲ್ಲಿ ಶೇರುಪೇಟೆಯ ಹೂಡಿಕೆ ಮಿತಿ ಕಳವಳ ಕುರಿತಂತೆ, ಕೇಂದ್ರ ಸರಕಾರ ಸ್ಪಷ್ಟ ಭರವಸೆ ನೀಡಿದೆ ಎಂದು ತಿಳಿಸಿದ್ದಾರೆ.

ಆದರೆ, ಚೀನಾದ ಕಂಪೆನಿಗಳು ಸಿಂಗಾಪೂರ್‌ನಲ್ಲಿ ಹೂಡಿಕೆಗೆ ಹೆಚ್ಚಿನ ಆಸಕ್ತಿಯನ್ನು ವಹಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿದ್ದಾರೆ.

ಜಮ್ಮು ಖಾಶ್ಮಿರದಲ್ಲಿ ಸೇನಾ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದ ಸೇನಾಧಿಕಾರಿಗೆ ವೀಸಾ ನಿರಾಕರಿಸಿದ ಚೀನಾ ನಿಲುವಿನ ವಿರುದ್ಧ ಭಾರತ ಅಸಮಧಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ, ಉಭಯ ದೇಶಗಳ ಮಧ್ಯೆ ಕೆಲ ಭಿನ್ನಾಭಿಪ್ರಾಯಗಳು ತಲೆದೋರಿದ್ದವು.
ಸಂಬಂಧಿತ ಮಾಹಿತಿ ಹುಡುಕಿ