ಮಳೆಯ ಕಾರಣದಿಂದಾಗಿ ಸರಬರಾಜಿನಲ್ಲಿ ತೊಂದರೆಯಾಗಿದ್ದರಿಂದ ದ್ದರಿಂದ ದ್ವಿದಳ ಧಾನ್ಯ, ತರಕಾರಿ ಮತ್ತು ಹಾಲು ದರದಲ್ಲಿ ಏರಿಕೆಯಾಗಿದ್ದರಿಂದ, ಸೆಪ್ಟೆಂಬರ್ 14ಕ್ಕೆ ವಾರಂತ್ಯಗೊಂಡಂತೆ ಆಹಾರ ಹಣದುಬ್ಬರ ದರ ಶೇ.15.10ಕ್ಕೆ ಏರಿಕೆಯಾಗಿದೆ
ಕಳೆದ ವಾರದ ಅವಧಿಯಲ್ಲಿ ಶೇ.11.47ಕ್ಕೆ ಏರಿಕೆ ಕಂಡಿದ್ದ ಆಹಾರ ಹಣದುಬ್ಬರ ದರ, ಪ್ರಸಕ್ತ ವಾರಂತ್ಯಕ್ಕೆ ಶೇ.15.10ಕ್ಕೆ ಏರಿಕೆಯಾಗಿದೆ. ಜುಲೈ ಮತ್ತು ಅಗಸ್ಟ್ ತಿಂಗಳ ಮೊದಲ ಅರ್ಧಾವಧಿಯಲ್ಲಿ ಇಳಿಕೆ ಕಂಡಿದ್ದ ಆಹಾರ ಹಣದುಬ್ಬರ ದರ, ಸತತ ಮೂರು ವಾರಗಳ ಅವಧಿಯಲ್ಲಿ ಏರಿಕೆ ಕಂಡಿದೆ.
ವಾರ್ಷಿಕ ಆಧಾರದನ್ವಯ ಕಳೆದ ವರ್ಷಕ್ಕೆ ಹೋಲಿಸಿದಲ್ಲಿ, ಪ್ರಸಕ್ತ ವಾರದಲ್ಲಿ ದ್ವಿದಳ ಧಾನ್ಯ ಭತ್ತ ಮತ್ತು ಗೋಧಿ ದರಗಳಲ್ಲಿ ಏರಿಕೆಯಾಗಿದ್ದರಿಂದ, ಧಾನ್ಯಗಳ ದರಗಳಲ್ಲಿ ಶೇ.7.16ರಷ್ಟು ಹೆಚ್ಚಳವಾಗಿದೆ.
ಇತರ ಆಹಾರ ವಸ್ತುಗಳಾದ ಹಾಲು ದರವನ್ನು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದಲ್ಲಿ ಶೇ.23.41ರಷ್ಟು ಏರಿಕೆಯಾಗಿದೆ. ಹಣ್ಣುಗಳ ದರಗಳಲ್ಲಿ ಶೇ.8.27ರಷ್ಟು ಹೆಚ್ಚಳವಾಗಿದೆ. ತರಕಾರಿ ದರಗಳಲ್ಲಿ ಶೇ.3.82ರಷ್ಟು ಹೆಚ್ಚಳವಾಗಿದೆ ಎಂದು ಮೂಲಗಳು ತಿಳಿಸಿವೆ.