ವಿದೇಶಿ ಬಂಡವಾಳದ ಒಳಹರಿವು ಹೆಚ್ಚಳವಾದ ಹಿನ್ನೆಲೆಯಲ್ಲಿ, ಡಾಲರ್ ಎದುರಿಗೆ ರೂಪಾಯಿ ಮೌಲ್ಯದಲ್ಲಿ 8 ಪೈಸೆ ಏರಿಕೆಯಾಗಿ 46.06 ರೂಪಾಯಿಗಳಿಗೆ ತಲುಪಿದೆ.
ವಿದೇಶಿ ವಿನಿಮಯ ಮಾರುಕಟ್ಟೆಯ ಹಿಂದಿನ ದಿನದ ವಹಿವಾಟಿನ ಮುಕ್ತಾಯಕ್ಕೆ ಡಾಲರ್ ಎದುರಿಗೆ ರೂಪಾಯಿ 21ಪೈಸೆ ಏರಿಕೆ ಕಂಡು 46.14/15 ರೂಪಾಯಿಗಳಿಗೆ ತಲುಪಿತ್ತು.ಇಂದಿನ ಆರಂಭಿಕ ವಹಿವಾಟಿನಲ್ಲಿ ಡಾಲರ್ ಎದುರಿಗೆ ರೂಪಾಯಿ ಮೌಲ್ಯದಲ್ಲಿ 8 ಪೈಸೆ ಏರಿಕೆಯಾಗಿ 46.06 ರೂಪಾಯಿಗಳಿಗೆ ತಲುಪಿದೆ.
ಬ್ಯಾಂಕ್‌ಗಳು ಮತ್ತು ಅಮುದು ವಹಿವಾಟುದಾರರಿಂದ ಡಾಲರ್ ಮಾರಾಟದಲ್ಲಿ ಹೆಚ್ಚಳ ಹಾಗೂ ವಿದೇಶಿ ಬಂಡವಾಳದ ಒಳಹರಿವಿನಿಂದಾಗಿ, ಡಾಲರ್ ಎದುರಿಗೆ ರೂಪಾಯಿ ಮೌಲ್ಯದಲ್ಲಿ ಚೇತರಿಕೆಯಾಗಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
ಏತನ್ಮಧ್ಯೆ, ಮುಂಬೈ ಶೇರುಪೇಟೆಯ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 197.01ಪಾಯಿಂಟ್‌ಗಳ ಏರಿಕೆ ಕಂಡು 19,614.86 ಅಂಕಗಳಿಗೆ ತಲುಪಿದೆ.