ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಗ್ರೀನ್ ಪ್ಲಾಜಾ: ವೆಬ್‌ದುನಿಯಾಕ್ಕೆ ನೋಕಿಯಾ ಪ್ರಶಸ್ತಿ (Nokia Developer Summit | Webdunia | London | prize | Green Plaza)
Bookmark and Share Feedback Print
 
PTI
ನಗರದಲ್ಲಿ ನಡೆದ ನೋಕಿಯಾ ಡೆವೆಲೊಪರ್ ಶೃಂಗಸಭೆಯಲ್ಲಿ, ವೆಬ್‌ದುನಿಯಾದ 'ಗ್ರೀನ್ ಪ್ಲಾಜಾ' ಮೊಬೈಲ್ ಅಪ್ಲೀಕೇಶನ್‌ಗೆ ಪರಿಸರ ವಿಭಾಗದಲ್ಲಿ ಮೂರನೇ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಇಂಟರ್‌ನ್ಯಾಷನಲ್ ಕನ್ವೆನ್ಶನ್ ಸೆಂಟರ್(ಐಸಿಸಿ)ನಲ್ಲಿ ನೋಕಿಯಾ2010 ಕಾಲಿಂಗ್ ಆಲ್ ಇನ್ನೊವೇಟರ್ಸ್ ಪ್ರಶಸ್ತಿ ಸಮಾರಂಭದಲ್ಲಿ, ವೆಬ್‌ದುನಿಯಾ ಡಾಟ್ ಕಾಂ ಉತ್ಪನ್ನವಾದ ವಿಶ್ವದಾದ್ಯಂತ 'ಗೋ ಗ್ರೀನ್' ಸಂದೇಶವನ್ನು ಬಿತ್ತರಿಸುವ 'ಗ್ರೀನ್ ಪ್ಲಾಜಾ'‌ಗೆ ಪರಿಸರ ವಿಭಾಗದಲ್ಲಿ ಪ್ರಶಸ್ತಿ ದೊರೆತಿದೆ.

ಜಾಗತಿಕ ಮೊಬೈಲ್ ಕ್ಷೇತ್ರದಲ್ಲಿ ಅಗ್ರಸ್ಥಾನದಲ್ಲಿರುವ ನೋಕಿಯಾ , ವೆಬ್‌ದುನಿಯಾ ತಂತ್ರಜ್ಞಾನವನ್ನು ಪರಿಗಣಿಸಿ ಪ್ರಶಸ್ತಿ ನೀಡಿ ಗೌರವಿಸಿರುವುದಕ್ಕೆ ಸಂತಸವಾಗಿದೆ ಎಂದು ವೆಬ್‌ದುನಿಯಾ ಡಾಟ್‌ ಕಾಂ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ ಅಧ್ಯಕ್ಷ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅದಿಕಾರಿ ಪಂಕಜ್ ಜೈನ್ ಸಂತಸ ವ್ಯಕ್ತಪಡಿಸಿದ್ದಾರೆ.

ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ಜೈನ್,ಗ್ರೀನ್ ಪ್ಲಾಜಾ ಅಪ್ಲೀಕೇಶನ್‌ ಆರಂಭಿಕ ವಿನ್ಯಾಸವಾಗಿದ್ದು, ಎಲ್ಲಾ ವಯಸ್ಸಿನವರಲ್ಲಿ ಭೂಮಿಯನ್ನು ಉಳಿಸಿ ಜಾಗೃತಿಯನ್ನು ಮೂಡಿಸುವಂತಹದಾಗಿದೆ. ವೆಬ್‌ದುನಿಯಾ ಸಂಸ್ಥೆ, ನಾಗರಿಕರ ಜೀವನದಲ್ಲಿ ಅಗತ್ಯವಾಗಿರುವ ಅತ್ಯಮೂಲ್ಯ ಅಪ್ಲಿಕೇಶನ್ಸ್‌ಗಳನ್ನು ಅಭಿವೃದ್ಧಿಪಡಿಸಿದ್ದು, ಇನ್ಫೋಟೇನ್‌ಮೆಂಟ್, ಎಂಟರ್‌ಟೇನ್‌ಮೆಂಟ್ ಮತ್ತು ನ್ಯೂಸ್ ವಿಭಾಗಗಳಲ್ಲಿ ನಿರಂತರವಾಗಿ ಹೊಸ ತಂತ್ರಜ್ಞಾನಗಳ ಅವಿಷ್ಕಾರದಲ್ಲಿ ತೊಡಗಿದೆ ಎಂದು ತಿಳಿಸಿದ್ದಾರೆ.

ವೆಬ್‌ದುನಿಯಾ ಸಂಸ್ಥೆಯ ತಂತ್ರಜ್ಞಾನ ವಿಭಾಗದ ಹಿರಿಯ ವ್ಯವಸ್ಥಾಪಕಿ ಬಬಿತಾ ಜೈನ್ ಮಾತನಾಡಿ, ವಿಶ್ವದ ಮೊಬೈಲ್ ಕ್ಷೇತ್ರದಲ್ಲಿ ಅಗ್ರಸ್ಥಾನದಲ್ಲಿರುವ ನೋಕಿಯಾ ಸಂಸ್ಥೆ ವೆಬ್‌ದುನಿಯಾ ತಂತ್ರಜ್ಞಾನವನ್ನು ಪರಿಗಣಿಸಿರುವುದು ಸಂತಸ ತಂದಿದೆ. 'ಗೋ ಗ್ರೀನ್' ವಿಶ್ವದ ಇಂದಿನ ಅಗತ್ಯತೆಯಾಗಿದೆ. ನಮ್ಮ ಅಪ್ಲಿಕೇಶನ್‌ನಿಂದ ಮೊಬೈಲ್ ಬಳಕೆದಾರರಿಗೆ ಅಗತ್ಯವಾದ ಮೇಲ್ವಿಚಾರಣೆ, ಕ್ರಮ ಮತ್ತು ವ್ಯವಸ್ಥಾಪನೆಗೆ ಅಧಿಕಾರ ನೀಡುತ್ತದೆ. ಇದರಿಂದಾಗಿ ಕಾರ್ಬನ್ ಹೊರಸುಸೂವ ಪ್ರಮಾಣದಲ್ಲಿ ಕಡಿಮೆಯಾಗಿ, ಪರಿಸರವನ್ನು ಹಸಿರಾಗಿಸುವಲ್ಲಿ ನೆರವಾಗುತ್ತದೆ ಎಂದು ಹೇಳಿದ್ದಾರೆ.

ವೆಬ್‌ದುನಿಯಾ ಡಾಟ್‌ ಕಾಂ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ ಅಧ್ಯಕ್ಷ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅದಿಕಾರಿ ಪಂಕಜ್ ಜೈನ್, ಸೆಪ್ಟೆಂಬರ್ 15 ರಂದು ಲಂಡನ್‌ನಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ