ನವದೆಹಲಿ, ಶುಕ್ರವಾರ, 17 ಸೆಪ್ಟೆಂಬರ್ 2010( 15:33 IST )
ಭಾರತೀಯ ರಿಸರ್ವ್ ಬ್ಯಾಂಕ್ ಹಣದುಬ್ಬರ ನಿಯಂತ್ರಣಕ್ಕಾಗಿ ರೆಪೋ ದರಗಳಲ್ಲಿ 25 ಬೇಸಿಸ್ ಪಾಯಿಂಟ್‌ಗಳನ್ನುಏರಿಕೆ ಮಾಡಿದ್ದರಿಂದ, ಬ್ಯಾಂಕ್‌ಗಳು ಕೂಡಾ ಅಕ್ಟೋಬರ್ 1ರಿಂದ ಗೃಹ, ವಾಹನ, ಕಾರು ಮತ್ತು ಇತರ ಸಾಲಗಳ ಬಡ್ಡಿದರಗಳಲ್ಲಿ ಏರಿಕೆ ಘೋಷಿಸುವ ಸಾಧ್ಯತೆಗಳಿವೆ.
ಸಾಲದ ಬೇಡಿಕೆಯಲ್ಲಿ ಹೆಚ್ಚಳವಾಗಿದ್ದರಿಂದ, ಬ್ಯಾಂಕ್‌ಗಳು ಹೆಚ್ಚಿನ ಠೇವಣಿಯನ್ನು ಸಂಗ್ರಹಿಸಲು ಠೇವಣಿ ಬಡ್ಡಿ ದರದಲ್ಲಿ ಹೆಚ್ಚಳವನ್ನು ಜಾರಿಗೆ ತರುವ ಸಾಧ್ಯತೆಗಳಿವೆ ಎಂದು ಬ್ಯಾಂಕ್ ಮೂಲಗಳು ತಿಳಿಸಿವೆ.
ಭಾರತೀಯ ರಿಸರ್ವ್ ಬ್ಯಾಂಕ್, ಪ್ರಸಕ್ತ ವಾರದಲ್ಲಿ ಹಣದುಬ್ಬರ ದರ ಶೇ.8.5ಕ್ಕೆ ಏರಿಕೆಯಾದ ಹಣದುಬ್ಬರ ನಿಯಂತ್ರಣಕ್ಕಾಗಿ ರಿವರ್ಸ್ ರೆಪೋ ದರಗಳಲ್ಲಿ 50 ಬೇಸಿಸ್ ಪಾಯಿಂಟ್‌ಗಳನ್ನು ಹೆಚ್ಚಿಸಿದೆ. ಏತನ್ಮಧ್ಯೆ, ಉತ್ಪಾದಕ ಕ್ಷೇತ್ರಗಳ ಸಾಲದ ಬೇಡಿಕೆಗೆ ಕೊರತೆಯಾಗದಂತೆ ಕ್ಯಾಶ್ ರಿಸರ್ವ್ ರೇಶಿಯೋದಲ್ಲಿ ಯಾವುದೇ ಬದಲಾವಣೆಗೆ ಸ್ಪಂದಿಸಿಲ್ಲ ಎಂದು ಮೂಲಗಳು ತಿಳಿಸಿವೆ.
ಹಣದುಬ್ಬರ ನಿಯಂತ್ರಣಕ್ಕಾಗಿ ಭಾರತೀಯ ರಿಸರ್ವ್ ಬ್ಯಾಂಕ್, ರೆಪೋ ದರಗಳಲ್ಲಿ ಏರಿಕೆ ಮಾಡಿರುವುದು ಹಣದುಬ್ಬರ ನಿಯಂತ್ರಣಕ್ಕೆ ಸಹಕಾರಿಯಾಗಲಿದೆ ಎಂದು ಕೇಂದ್ರ ವಿತ್ತಖಾತೆ ಸಚಿವ ಪ್ರಣಬ್ ಮುಖರ್ಜಿ ತಿಳಿಸಿದ್ದಾರೆ.