ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಪ್ರಸಕ್ತ ವರ್ಷದ ಬಂಪರ್ ಬೆಳೆಯ ನಿರೀಕ್ಷೆ:ಶರದ್ ಪವಾರ್ (Foodgrain crop | Bumper crop | India | Sharad Pawar | Pulses | Oilseeds | Cotton,)
ನವದೆಹಲಿ, ಶುಕ್ರವಾರ, 17 ಸೆಪ್ಟೆಂಬರ್ 2010( 17:43 IST )
ಬಿಹಾರ್, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳದ ಕೆಲ ರಾಜ್ಯಗಳಲ್ಲಿ ಎದುರಾಗಿರುವ ಬರಗಾಲದ ಮಧ್ಯೆಯು, ಪ್ರಸಕ್ತ ವರ್ಷದ ಅವಧಿಯಲ್ಲಿ ಬಂಪರ್ ಬೆಳೆಯನ್ನು ನಿರೀಕ್ಷಿಸಲಾಗಿದೆ ಎಂದು ಕೇಂದ್ರ ಕೃಷಿ ಮತ್ತು ಆಹಾರ ಖಾತೆ ಸಚಿವ ಶರದ್ ಪವಾರ್ ಹೇಳಿದ್ದಾರೆ.
ಪ್ರಸಕ್ತ ವರ್ಷದಲ್ಲಿ ಬಂಪರ್ ಭೆಳೆಯಾಗುವ ನಿರೀಕ್ಷೆಗಳಿರುವುದರಿಂದ, ಉತ್ತಮ ವರ್ಷವಾಗಿದೆ ಎಂದು ರಾಷ್ಟ್ರೀಯ ರಬಿ ಸಮ್ಮೇಳನದಲ್ಲಿ ಭಾಗವಹಿಸಿದ್ದ ಪವಾರ್ ಸಂತಸ ವ್ಯಕ್ತಪಡಿಸಿದ್ದಾರೆ.
ಕಳೆದ 2008ರ ಅವಧಿಯಲ್ಲಿ ಪಶ್ಚಿಮ ಬಂಗಾಳ, ಜಾರ್ಖಂಡ್ ಮತ್ತು ಬಿಹಾರ್ ರಾಜ್ಯಗಳಲ್ಲಿ ಬರಗಾಲ ಎದುರಾಗಿದ್ದರೂ ದೇಶದ ಕೃಷಿ ಉತ್ಪಾದನೆಯಲ್ಲಿ ಗರಿಷ್ಠ ಹೆಚ್ಚಳವಾಗಿತ್ತು.ಪ್ರಸಕ್ತ ವರ್ಷದಲ್ಲಿ ಉತ್ತಮ ಬೆಳೆಯಾಗಲಿದೆ ಎಂದರು.
ದ್ವಿದಳ ಧಾನ್ಯ, ಹತ್ತಿ, ಕಬ್ಬು , ಭತ್ತ ಬೆಳೆಯುವ ಪ್ರದೇಶಗಳಲ್ಲಿ, 2008ರ ಅವಧಿಗಿಂತ ಹೆಚ್ಚಿನ ಉತ್ಪಾದನೆಯಾಗುವ ಸಾಧ್ಯತೆಗಳಿವೆ ಎಂದು ಪವಾರ್ ತಿಳಿಸಿದ್ದಾರೆ.
ಕಳೆದ ವರ್ಷ, ಭತ್ತ ಬೆಳೆಯುವ ಸುಮಾರು 300 ಜಿಲ್ಲೆಗಳಲ್ಲಿ ಬರಗಾಲ ಎದುರಾಗಿತ್ತು. ಆದರೆ, ಪ್ರಸಕ್ತ ವರ್ಷದ ಕೃಷಿ ಉತ್ಪಾದನೆ ತೃಪ್ತಿಕರವಾಗಿದೆ ಎಂದು ಪವಾರ್ ಸಂತಸ ವ್ಯಕ್ತಪಡಿಸಿದ್ದಾರೆ.