ದರ ಏರಿಕೆಯ ನಾಗಾಲೋಟದಲ್ಲಿ ಮುಂದುವರಿದಿರುವ ಬೆಳ್ಳಿಯ ದರ, ಇಂದಿನ ಆರಂಭಿಕ ವಹಿವಾಟಿನಲ್ಲಿ ಪ್ರತಿ ಕೆಜಿಗೆ 33,000 ರೂಪಾಯಿಗಳಿಗೆ ತಲುಪಿ ದಾಖಲೆಯ ಏರಿಕೆ ಕಂಡಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
ಕೈಗಾರಿಕೋದ್ಯಮ ಕ್ಷೇತ್ರಗಳಿಂದ ಬೇಡಿಕೆಯಲ್ಲಿ ಹೆಚ್ಚಳವಾಗಿದ್ದರಿಂದ, ಕೇವಲ ಎಂಟು ದಿನಗಳ ಅವಧಿಯಲ್ಲಿ ಬೆಳ್ಳಿಯ ದರ ಪ್ರತಿ ಕೆಜಿಗೆ 32,000 ರೂಪಾಯಿಗಳಿಂದ 33,000 ರೂಪಾಯಿಗಳಿಗೆ ಏರಿಕೆ ಕಂಡಿದೆ.
ಜಾಗತಿಕ ಆರ್ಥಿಕತೆ ಚೇತರಿಕೆಯಿಂದಾಗಿ ಸಾಗರೋತ್ತರ ಮಾರುಕಟ್ಟೆಯಲ್ಲಿ ಕೂಡಾ ಬೆಳ್ಳಿಯ ದರ ಗಗನಕ್ಕೇರುತ್ತಿದ್ದು,ಹೂಡಿಕೆದಾರರು ಚಿನ್ನದ ಬದಲಿಗೆ ಬೆಳ್ಳಿಯ ಖರೀದಿಯಲ್ಲಿ ತೊಡಗಿರುವುದು ಹೆಚ್ಚಳವಾಗಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
ಬೆಳ್ಳಿಯ ದರ ಇಂದಿನ ವಹಿವಾಟಿನಲ್ಲಿ ಪ್ರತಿ ಕೆಜಿಗೆ 140 ರೂಪಾಯಿಗಳ ಏರಿಕೆ ಕಂಡು 32,915 ರೂಪಾಯಿಗಳಿಂದ 33,055 ರೂಪಾಯಿಗಳಿಗೆ ಏರಿಕೆಯಾಗಿದೆ.