ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಸದ್ಯಕ್ಕೆ ಬಡ್ಡಿ ದರ ಏರಿಕೆ ಸಾಧ್ಯತೆಗಳಿಲ್ಲ:ಎಸ್‌ಬಿಐ (No immediate hike in rates, says SBI)
Bookmark and Share Feedback Print
 
ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರಗಳನ್ನು ಹೆಚ್ಚಿಸಿರುವ ಮಧ್ಯೆಯು, ಮುಂಬರುವ ಮೂರರಿಂದ ಆರು ತಿಂಗಳುಗಳವರೆಗೆ ಬಡ್ಡಿ ದರ ಏರಿಕೆ ಘೋಷಿಸುವ ಸಾಧ್ಯತೆಗಳಿಲ್ಲ ಎಂದು ಎಸ್‌ಬಿಐ ಮುಖ್ಯಸ್ಥ ಒ.ಪಿ.ಭಟ್ ಹೇಳಿದ್ದಾರೆ.

ಪ್ರಸ್ತುತ ಯಾವುದೇ ಬ್ಯಾಂಕ್‌ಗಳು ಬಡ್ಡಿ ದರಗಳಲ್ಲಿ ಏರಿಕೆ ಮಾಡುತ್ತವೆ ಎಂದು ನಾನು ಭಾವಿಸಿಲ್ಲ. ಮಾರುಕಟ್ಟೆಗಳಲ್ಲಿ ನಗದು ಹರಿವಿನ ಪ್ರಮಾಣ ಹೆಚ್ಚಳವಾಗಿರುವುದರಿಂದ ಮುಂಬರುವ ಆರು ತಿಂಗಳುಗಳವರೆಗೆ ಬಡ್ಡಿ ದರ ಏರಿಕೆಯಾಗುವುದಿಲ್ಲ ಎಂದು ತಿಳಿಸಿದ್ದಾರೆ.

ರಿಸರ್ವ್ ಬ್ಯಾಂಕ್ ಹಣದುಬ್ಬರ ನಿಯಂತ್ರಣಕ್ಕಾಗಿ ರೆಪೋ ದರದಲ್ಲಿ 25 ಬೇಸಿಸ್ ಪಾಯಿಂಟ್‌ಗಳು ಹಾಗೂ ರಿವರ್ಸ್ ರೆಪೋ ದರಗಳಲ್ಲಿ 50 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಳಗೊಳಿಸಿದೆ.

ಮುಂದಿನ ಮೂರು ತಿಂಗಳುಗಳ ನಂತರ ಆರ್ಥಿಕ ಪರಿಸ್ಥಿತಿಗಳ ಬದಲಾವಣೆಗಳನ್ನು ಗಮನಿಸಿ,25 ಬೇಸಿಸ್ ಪಾಯಿಂಟ್‌ಗಳನ್ನು ಹೆಚ್ಚಿಸುವ ಸಾಧ್ಯತೆಗಳಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮುಂಬರುವ ದಿನಗಳಲ್ಲಿ ಸಾಲದ ಬಡ್ಡಿ ದರ ಸೇರಿದಂತೆ ಠೇವಣಿ ಬಡ್ಡಿ ದರದಲ್ಲಿ ಕೂಡಾ ಏರಿಕೆಯಾಗಲಿವೆ ಎಂದು ಎಸ್‌ಬಿಐ ಮುಖ್ಯಸ್ಥ ಒ.ಪಿ.ಭಟ್ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ