ಇದೀಗ ಪೆನ್‌ಡ್ರೈವ್ ಬಳಕೆದಾರರು ಬಾಲಿವುಡ್ ಸಿನೆಮಾಗಳನ್ನು ಹೊಂದಿರುವ ಪೆನ್‌ಡ್ರೈವ್‌ಗಳನ್ನು ಶೀಘ್ರದಲ್ಲಿ ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಗುತ್ತಿದ್ದು, 850 ರೂಪಾಯಿಗಳ ದರವನ್ನು ನಿಗದಿಪಡಿಸಲಾಗಿದೆ ಎಂದು ಮೊಸೆರ್ ಬಾಯೆರ್ ಕಂಪೆನಿ ಘೋಷಿಸಿದೆ.
ಮಾಸಿಕವಾಗಿ 1ಲಕ್ಷ ಪೆನ್‌ಡ್ರೈವ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸುವ ಯೋಜನೆಯಿದ್ದು, ದೇಶದ ಪೆನ್‌ಡ್ರೈವ್ ಮಾರುಕಟ್ಟೆಯಲ್ಲಿ ಹೆಚ್ಚುವರಿಯಾಗಿ ಶೇ.4-5ರಷ್ಟು ಪಾಲನ್ನು ಹೊಂದುವ ಗುರಿಯಿದೆ ಎಂದು ಕಂಪೆನಿಯ ಅಧಿಕಾರಿಗಳು ತಿಳಿಸಿದ್ದಾರೆ.
ಮುಂಬರುವ ದಿನಗಳಲ್ಲಿ, ಬಾಲಿವುಡ್ ಸಿನೆಮಾಗಳನ್ನು ಹೊಂದಿರುವ 8ಜಿಬಿ ಮತ್ತು 16 ಜಿಬಿ ಪೆನ್‌ಡ್ರೈವ್‌ಗಳನ್ನು ಶೀಘ್ರದಲ್ಲಿ ಮಾರುಕಟ್ಟೆಗೆ ಬರಲಿವೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
ಏತನ್ಮಧ್ಯೆ, ಪೆನ್‌ಡ್ರೈವ್ ಬಳಕೆದಾರರು ತಮಗೆ ಅಗತ್ಯವಾದಲ್ಲಿ ಬಾಲಿವುಡ್ ಸಿನೆಮಾಗಳನ್ನು ಸುಲಭವಾಗಿ ಅಳಿಸಿಹಾಕಿ, ಸಾಮಾನ್ಯ ಪೆನ್‌ಡ್ರೈವ್‌ನಂತೆ ಬಳಸಬಹುದಾಗಿದೆ.
ಟಿ-ಸೀರಿಸ್ ಸಂಸ್ಥೆ, ಬಾಲಿವುಡ್ ನಾಯಕರಾದ ಅಕ್ಷಯ್ ಕುಮಾರ್ ಮತ್ತು ಸಂಜಯ್ ದತ್ತ್ ನಾಯಕತ್ವದ 'ಬ್ಲೂ' ಸಿನೆಮಾವನ್ನು ಪೆನ್‌ಡ್ರೈವ್‌ನಲ್ಲಿ ಬಿಡುಗಡೆಗೊಳಿಸಿರುವುದನ್ನು ಸ್ಮರಿಸಬಹುದು.