ಮಾರುಕಟ್ಟೆಯಿಂದ 20 ಸಾವಿರ ಕೋಟಿ ರೂ: ಎಸ್‌ಬಿಐ ಪ್ರಸ್ಥಾವನೆ
ನವದೆಹಲಿ, ಸೋಮವಾರ, 20 ಸೆಪ್ಟೆಂಬರ್ 2010( 18:56 IST )
ದೇಶದ ಅತಿ ದೊಡ್ಡ ಬ್ಯಾಂಕ್ ಖ್ಯಾತಿಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇದೀಗ ಮಾರುಕಟ್ಟೆಯಿಂದ 20,000 ಕೋಟಿ ರೂಪಾಯಿಗಳನ್ನು ಸಂಗ್ರಹಿಸಲು ಹಣಕಾಸು ಸಚಿವಾಲಯಕ್ಕೆ ಪ್ರಸ್ಥಾವನೆ ಸಲ್ಲಿಸಿದೆ.
ಸಂಗ್ರಹಿಸಿದ ಈ ಹಣವನ್ನು ತನ್ನ ವಹಿವಾಟು ವಿಸ್ತರಿಸಿಕೊಳ್ಳಲು ಬ್ಯಾಂಕ್ ಬಳಸಿಕೊಳ್ಳಲಿದೆ. ಹಕ್ಕಿನ ಷೇರುಗಳ ಮೂಲಕ ಈ 20,000 ಕೋಟಿ ರೂ ಹಣ ಸಂಗ್ರಹಿಸುವ ಚಿಂತನೆಯನ್ನು ಬ್ಯಾಂಕ್ ಹೊಂದಿದೆ.
ಎಸ್‌ಬಿಐ ಸಲ್ಲಿಸಿರುವ ಪ್ರಸ್ಥಾವನೆ ನಮಗೆ ದೊರೆತಿದ್ದು, ಈ ಬಗ್ಗೆ ಶೀಘ್ರವೇ ತೀರ್ಮಾನ ಕೈಗೊಳ್ಳಲಿದ್ದೇವೆ ಎಂದು ಹಣಕಾಸು ಇಲಾಖೆ ತಿಳಿಸಿದೆ.