ಹೊಸ ಇನ್ಶುರೆನ್ಸ್ ಯೋಜನೆ
ಬ್ಯಾಂಕ್ ಆಫ್ ಇಂಡಿಯಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಜಪಾನಿನ ಡೈ ಇಚಿ ಲೈಫ್ ಇನ್ಶುರೆನ್ಸ್ ಜಂಟಿ ಸಂಸ್ಥೆಯಾಗಿರುವ ಸ್ಟಾರ್ ಯೂನಿಯನ್ ಡೈ ಇಚಿ ಲೈಫ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್ ಮೂರು ಹೊಸ ಯೋಜನೆಗಳನ್ನು ಆರಂಭಿಸಿದೆ. ಸಾಂಪ್ರದಾಯಿಕ ಎಂಡೋಮೆಂಟ್, ಧನ್ ಸುರಕ್ಷಾ 3 ಹಾಗೂ ಧನ್ ಸುರಕ್ಷಾ 3 ಪ್ರೀಮಿಯಂ ಹೆಸರಿನ ಈ ಉತ್ಪನ್ನಗಳು 15 ವರ್ಷಗಳವರೆಗೆ ನಿಯಮಿತ ತೆರಿಗೆ ಮುಕ್ತ ಮಾಸಿಕ ಲಾಭ ತಂದು ಕೊಡಲಿದೆ.