ಗ್ರಾಹಕರಿಗೆ ಸಂಕಟ:ಪೆಟ್ರೋಲ್ ದರದಲ್ಲಿ ಮತ್ತೆ 27ಪೈಸೆ ಏರಿಕೆ
ನವದೆಹಲಿ, ಮಂಗಳವಾರ, 21 ಸೆಪ್ಟೆಂಬರ್ 2010( 12:42 IST )
ಸರಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೋರೇಶನ್(ಐಒಸಿ) ಪೆಟ್ರೋಲ್ ದರದಲ್ಲಿ 27ಪೈಸೆ ಏರಿಕೆ ಘೋಷಿಸಿದ್ದು, ಇಂದು ಮಧ್ಯರಾತ್ರಿಯಿಂದ ಜಾರಿಗೆ ಬರಲಿದೆ.ಇತರ ಸಾರ್ವಜನಿಕ ಕ್ಷೇತ್ರದ ತೈ ಕಂಪೆನಿಗಳು ಕೂಡಾ, ಕೆಲ ದಿನಗಳಲ್ಲಿ ದರ ಏರಿಕೆ ಘೋಷಿಸುವ ಸಾಧ್ಯತೆಗಳಿವೆ.
ದರ ಏರಿಕೆಯಿಂದಾಗಿ ದೆಹಲಿಯಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್‌ಗೆ 51.56 ರೂಪಾಯಿಗಳಿಂದ 51.83 ರೂಪಾಯಿಗಳಿಗೆ ಏರಿಕೆಯಾಗಿದೆ ಎಂದು ಇಂಡಿಯನ್ ಆಯಿಲ್ ಅಧಿಕಾರಿಗಳು ತಿಳಿಸಿದ್ದಾರೆ.
ಅಂತಾರಾಷ್ಟೀಯ ಕಚ್ಚಾ ತೈಲ ಮಾರುಕಟ್ಟೆಗಳಲ್ಲಿ ತೈಲ ದರ ಏರಿಕೆಯಾಗಿದ್ದರಿಂದ, ದರ ಏರಿಕೆ ಅನಿವಾರ್ಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಾಗರೋತ್ತರ ಮಾರುಕಟ್ಟೆಯಾದ ನ್ಯೂಯಾರ್ಕ್‌ನಲ್ಲಿ, ಕಚ್ಚಾ ತೈಲ ದರ ಪ್ರತಿ ಬ್ಯಾರೆಲ್‌ಗೆ 21 ಸೆಂಟ್‌ಗಳ ಏರಿಕೆಯಾಗಿ 73.87ಡಾಲರ್‌ಗಳಿಗೆ ತಲುಪಿದೆ.
ಹಿಂದೂಸ್ತಾನ್ ಪೆಟ್ರೋಲಿಯಂ ಮತ್ತು ಭಾರತ್ ಪೆಟ್ರೋಲಿಯಂ ತೈಲ ಸಂಸ್ಥೆಗಳು, ಕೆಲ ದಿನಗಳಲ್ಲಿ ಪೆಟ್ರೋಲ್ ದರದಲ್ಲಿ 27-28ಪೈಸೆ ಹೆಚ್ಚಳ ಘೋಷಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ಮುಂಬೈಯಲ್ಲಿ ಪೆಟ್ರೋಲ್ ದರ 55.97 ರೂಪಾಯಿಗಳಿಂದ 56.25 ರೂಪಾಯಿಗಳಿಗೆ ತಲುಪಿದೆ. ಕೋಲ್ಕತಾದಲ್ಲಿ ಪೆಟ್ರೋಲ್ ದರ 55.69 ರೂ.ಚೆನ್ನೈನಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್‌ಗೆ 56.31 ರೂಪಾಯಿಗಳಿಗೆ ತಲುಪಿದೆ.