ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರಗಳನ್ನು ಹೆಚ್ಚಿಸಿದ್ದರಿಂದ ಇತ್ತಿಚೆಗೆ ಠೇವಣಿ ದರಗಳಲ್ಲಿ ಏರಿಕೆ ಘೋಷಿಸಿದ್ದ ಯುನಿಯನ್ ಬ್ಯಾಂಕ್, ಮತ್ತೆ ಠೇವಣಿ ಬಡ್ಡಿ ದರಗಳಲ್ಲಿ ಏರಿಕೆ ಘೋಷಿಸುವ ಸಾಧ್ಯತೆಗಳಿವೆ ಎಂದು ಬ್ಯಾಂಕ್ ಮೂಲಗಳು ತಿಳಿಸಿವೆ.
ನಾವು ಕೆಲ ದಿನಗಳ ಹಿಂದೆ ಠೇವಣಿ ಬಡ್ಡಿ ದರಗಳಲ್ಲಿ ಏರಿಕೆ ಘೋಷಿಸಿದ್ದೇವೆ. ಅಗತ್ಯವಾದಲ್ಲಿ ಮತ್ತು ಸುತ್ತಿನ ಠೇವಣಿ ಬಡ್ಡಿ ದರ ಏರಿಕೆ ಮಾಡಲಾಗುವುದು ಎಂದು ಯುನಿನ್ ಬ್ಯಾಂಕ್ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಎಂ.ವಿ.ನಾಯರ್ ಹೇಳಿದ್ದಾರೆ.
ಮೂರನೇ ತ್ರೈಮಾಸಿಕ ಅವಧಿಯಲ್ಲಿ ಮಾರುಕಟ್ಟೆಯಲ್ಲಿ ನಗದು ಹರಿವಿನಲ್ಲಿ ಕೊರತೆಯಾಗುವ ಸಾಧ್ಯತೆಗಳಿವೆ.ಬ್ಯಾಂಕ್‌ಗಳು ಸಾಲ ನೀಡಿಕೆಯಲ್ಲಿ ಹೆಚ್ಚಳಗೊಳಿಸಲು ಠೇವಣಿ ಬಡ್ಡಿ ದರ ಏರಿಕೆ ಅನಿವಾರ್ಯವಾಗುತ್ತದೆ ಎಂದು ತಿಳಿಸಿದ್ದಾರೆ.
ಹಣದುಬ್ಬರ ದರ ಏರಿಕೆಯಿಂದ ಹಲವು ಕ್ಷೇತ್ರಗಳು ಋಣಾತ್ಮಕತೆಯತ್ತ ವಾಲುತ್ತಿರುವುದರಿಂದ, ಠೇವಣಿಗಳಲ್ಲಿ ಕೊರತೆಯಾಗುತ್ತಿದೆ ಎಂದು ನಾಯರ್ ಅಭಿಪ್ರಾಯಪಟ್ಟಿದ್ದಾರೆ.