ವಾಷಿಂಗ್ಟನ್, ಬುಧವಾರ, 22 ಸೆಪ್ಟೆಂಬರ್ 2010( 13:20 IST )
ಅಮೆರಿಕದ ಒಹಿಯೊ ರಾಜ್ಯ ಹೊರಗುತ್ತಿಗೆ ನಿಷೇಧಿಸಿರುವುದು ಅನಾರೋಗ್ಯಕರ ನಿರ್ಧಾರವಾಗಿದೆ ಎಂದು ಕೇಂದ್ರದ ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಆನಂದ್ ಶರ್ಮಾ ಹೇಳಿದ್ದಾರೆ.
ಅಮೆರಿಕದ ಕಾರ್ಪೋರೇಟ್ ಕಂಪೆನಿಗಳು ಮುಖ್ಯಸ್ಥರು ಹಾಗೂ ಹೊರಗುತ್ತಿಗೆ ವಹಿವಾಟುದಾರರು ನಿಷೇಧ ಕುರಿತಂತೆ ಸಂಸತ್ತಿನಲ್ಲಿ ಜನಪ್ರತಿನಿಧಿಗಳೊಂದಿಗೆ ನಿಷೇಧ ಹಿಂಪಡೆಯುವತ್ತ ಗಮನಸೆಳೆಯುವಲ್ಲಿ ಪ್ರಯತ್ನಿಸಬೇಕು ಎಂದು ಶರ್ಮಾ ಕರೆ ನೀಡಿದ್ದಾರೆ.
ಅಮೆರಿಕದ ಒಹಿಯೊ ರಾಜ್ಯದ ಸರಕಾರ ಹೊರಗುತ್ತಿಗೆಗೆ ನಿಷೇಧ ಹೇರಿದ ಅನಾರೋಗ್ಯಕರ ನಿರ್ಧಾರವನ್ನು, ಇತರ ರಾಜ್ಯಗಳು ನಿಷೇಧ ಹೇರುವುದಿಲ್ಲ ಎನ್ನುವ ವಿಶ್ವಾಸವಿರುವುದಾಗಿ ಶರ್ಮಾ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಭಾರತದ ಏರ್‌ಟೆಲ್ ಕಂಪೆನಿ, ಅಮೆರಿಕ ಮೂಲದ ಐಬಿಎಂ ಕಂಪೆನಿಗೆ 3.5ಬಿಲಿಯನ್ ಡಾಲರ್‌ಗಳ ಬೇಡಿಕೆಯನ್ನು ಸಲ್ಲಿಸಿರುವುದು ಹೊರಗುತ್ತಿಗೆಯಲ್ಲದೇ ಮತ್ತೇನು?ಎಂದು ಪ್ರಶ್ನಿಸಿದ ಅವರು, ಅಮೆರಿಕದಲ್ಲಿ ಉದ್ಯೋಗ ಹೆಚ್ಚಳಕ್ಕೆ ಭಾರತ ನೆರವಾಗುತ್ತಿದೆ.
ಕೆಲವು ದಿನಗಳ ಹಿಂದೆ ಭಾರತ ಅಮೆರಿಕದ ಬೋಯಿಂಗ್ ವಿಮಾನ ತಯಾರಿಕೆ ಸಂಸ್ಥೆಗೆ ಹಲವು ಬಿಲಿಯನ್ ಡಾಲರ್‌ಗಳ ಬೇಡಿಕೆ ಸಲ್ಲಿಸಿದೆ. ಇದರಿಂದಾಗಿ ಸಾವಿರಾರು ಸಂಖ್ಯೆಯಲ್ಲಿ ನಿರುದ್ಯೋಗಿಗಳು ಉದ್ಯೋಗ ಪಡೆಯುವಲ್ಲಿ ನೆರವಾಗಲಿದೆ ಎಂದು ಕೇಂದ್ರದ ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಆನಂದ್ ಶರ್ಮಾ ಹೇಳಿದ್ದಾರೆ.