ವಿಶ್ವದಲ್ಲಿ ಕಡಿಮೆ ದರದ ಕಾರು ಎನ್ನುವ ಖ್ಯಾತಿಗೆ ಒಳಗಾದ ನ್ಯಾನೋ, ಮುಂದಿನ ವರ್ಷಾಂತ್ಯಕ್ಕೆ ಕಾರು ಮಾರಾಟದಲ್ಲಿ ಎರಡನೇ ಸ್ಥಾನವನ್ನು ಪಡೆಯಲಿದೆ ಎಂದು ಅಧ್ಯನ ಸಂಸ್ಥೆ ಜೆಡಿ ಪವರ್ ವರದಿಯಲ್ಲಿ ಬಹಿರಂಗಪಡಿಸಿದೆ.
ಜೆಡಿ ಪವರ್ ವರದಿಯ ಪ್ರಕಾರ, ಹುಂಡೈಐ10 ಮಾಡೆಲ್ ಕಾರು ಮಾರಾಟದಲ್ಲಿ ಹಿಂದಿಕ್ಕಿ ನ್ಯಾನೋ ಎರಡನೇ ಸ್ಥಾನವನ್ನು ಪಡೆಯಲಿದ್ದು,ಮಾರುತಿ ಸುಝುಕಿಯ ಅಲ್ಟೋ ಮಾಡೆಲ್ ಕಾರು ಅಗ್ರಸ್ಥಾನವನ್ನು ಪಡೆಯಲಿದೆ. ಮೂರನೇ ಸ್ಥಾನದಲ್ಲಿ ಟಾಟಾ ಮೋಟಾರ್ಸ್‌ನ ಇಂಡಿಕಾ ಮೂರನೇ ಸ್ಥಾನದಲ್ಲಿರಲಿದೆ ಎಂದು ತಿಳಿಸಿದ್ದಾರೆ.
ಟಾಟಾ ಮೋಟಾರ್ಸ್ ಕಂಪೆನಿ, ನ್ಯಾನೋ ಉತ್ಪಾದನೆಯಲ್ಲಿ ಹೆಚ್ಚಳಗೊಳಿಸುತ್ತಿರುವುದರಿಂದ ಮುಂಬರುವ 2011ರ ಅವಧಿಯ ಕಾರು ಮಾರಾಟದಲ್ಲಿ ಎರಡನೇ ಸ್ಥಾನದಲ್ಲಿರಲಿದೆ ಎಂದು ಜೆಡಿ ಪವರ್ ಹಿರಿಯ ಮಾರುಕಟ್ಟೆ ತಜ್ಞ ಮಾರ್ವಿನ್ ಝೌ ಅಭಿಪ್ರಾಯಪಟ್ಟಿದ್ದಾರೆ.
ಮುಂಬರುವ 2017ರ ವೇಳೆಗೆ ದೇಶದಲ್ಲಿ ಅಲ್ಟೋ, ನ್ಯಾನೋ ಮತ್ತು ಮಾರುತಿ ಸುಝಕಿ ಹಾಗೂ ವಾಗನ್‌ಆರ್ ಕಂಪೆನಿಗಳು ಅಗ್ರ ನಾಲ್ಕು ಸ್ಥಾನಗಳು ಪಡೆಯಲಿವೆ ಎಂದು ಹೇಳಿದ್ದಾರೆ.
ಪ್ರಸ್ತುತ, ದೇಶದಲ್ಲಿ ಅಲ್ಟೋ ಮಾಡೆಲ್ ಕಾರು ಗರಿಷ್ಠ ಮಾರಾಟವನ್ನು ಹೊಂದಿದ್ದು, ಮಾಸಿಕವಾಗಿ 25,000 ಕಾರುಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದು ಮಾರ್ವಿನ್ ಝೌ ತಿಳಿಸಿದ್ದಾರೆ.