ದಕ್ಷಿಣ ಭಾರತದಲ್ಲಿ ಘಟಕವನ್ನು ಸ್ಥಾಪಿಸಲು ಕೋಕಾಕೋಲಾ ಕಂಪೆನಿ, ಒಟ್ಟು 121 ಮಿಲಿಯನ್ ಡಾಲರ್‌ಗಳ ಹೂಡಿಕೆ ಮಾಡಲು ನಿರ್ಧರಿಸಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
ಕರ್ನಾಟಕದ ಉತ್ತರ ಭಾಗದಲ್ಲಿರುವ ಯಾದಗಿರಿ ಜಿಲ್ಲೆಯಲ್ಲಿ ಘಟಕವನ್ನು ಸ್ಥಾಪಿಸಲು ಯೋಜನೆಗಳನ್ನು ರೂಪಿಸಿದ್ದು, ಭಾರತದಲ್ಲಿ ಒಟ್ಟು 1.2 ಬಿಲಿಯನ್ ಡಾಲರ್‌ಗಳನ್ನು ಹೂಡಿಕೆ ಮಾಡಲಾಗುವುದು ಎಂದು ಹಿಂದೂಸ್ತಾನ್ ಕೋಕಾಕೋಲಾ ಕಂಪೆನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಟಿ.ಕೃಷ್ಣಕುಮಾರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ದೇಶದಲ್ಲಿ ಕೋಕಾಕೋಲಾ ಘಟಕಗಳನ್ನು ಸ್ಥಾಪಿಸಲು ಮೊದಲ ಹಂತದಲ್ಲಿ 2.5 ಬಿಲಿಯನ್ ರೂಪಾಯಿಗಳಷ್ಟು ಹೂಡಿಕೆಗೆ ನಿರ್ಧರಿಸಲಾಗಿದೆ. ಎರಡನೇ ಹಂತದಲ್ಲಿ 3 ಬಿಲಿಯನ್ ಡಾಲರ್‌ಗಳನ್ನು ಹೂಡಿಕೆ ಮಾಡಲು ಯೋಜನೆಗಳ ರೂಪರೇಷೆಗಳು ಅಂತಿಮ ಹಂತದಲ್ಲಿವೆ ಎಂದು ಹೇಳಿದ್ದಾರೆ.
ಏಷ್ಯಾದ ಮೂರನೇ ಬೃಹತ್ ಆರ್ಥಿಕ ರಾಷ್ಟ್ರವಾದ ಭಾರತದಲ್ಲಿ, ಕೋಕಾಕೋಲಾ ಕಂಪೆನಿಯ ಬಾಟ್ಲಿಂಗ್ ಹೊಣೆಗಾರಿಕೆಯನ್ನು ಹಿಂದೂಸ್ತಾನ್ ಕೋಕಾಕೋಲಾ ಕಂಪೆನಿ ವಹಿಸಿಕೊಂಡಿದೆ.
ಸರಕಾರದಿಂದ ಅನುಮತಿ ಪಡೆದ ನಂತರ ಗುಲ್ಬರ್ಗಾ ಬಳಿಯಿರುವ ಯಾದಗಿರಿ ಜಿಲ್ಲೆಯಲ್ಲಿ ಘಟಕದ ಕಾಮಗಾರಿಯನ್ನು ಶೀಘ್ರದಲ್ಲಿ ಆರಂಭಿಸಲಾಗುವುದು ಎಂದು ಟಿ.ಕೃಷ್ಣಕುಮಾರ್ ತಿಳಿಸಿದ್ದಾರೆ.