ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಬಿಲ್ ಗೇಟ್ಸ್ ಇವತ್ತಿಗೂ ಅಮೆರಿಕದ ಶ್ರೀಮಂತ ವ್ಯಕ್ತಿ:ಫೋರ್ಬ್ಸ್ (US billionaires | Bill Gates | America | Richest | Warren Buffett)
Bookmark and Share Feedback Print
 
PTI
ಅಮೆರಿಕದ ಬಿಲಿಯನೇರ್‌ಗಳ ವಹಿವಾಟಿನಲ್ಲಿ ಮತ್ತೆ ಹೆಚ್ಚಳವಾಗಿದ್ದು, ಅರ್ಧಕ್ಕಿಂತ ಹೆಚ್ಚು ಬಿಲಯನೇರ್‌ಗಳು ತಮ್ಮ ಸಂಪತ್ತನ್ನು ಹೆಚ್ಚಿಸಿಕೊಂಡಿದ್ದಾರೆ. ಸತತ 17ನೇ ವರ್ಷವೂ ಕೂಡಾ ಬಿಲ್‌ಗೇಟ್ಸ್ ಅತ್ಯಂತ ಶ್ರೀಮಂತ ವ್ಯಕ್ತಿ ಎನ್ನುವ ಖ್ಯಾತಿಯನ್ನು ಉಳಿಸಿಕೊಂಡಿದ್ದಾರೆ ಎಂದು ಫೋರ್ಬ್ಸ್ ಮ್ಯಾಗ್‌ಜಿನ್ ವರದಿ ಮಾಡಿದೆ.

ಮೈಕ್ರೋಸಾಫ್ಟ್ ಮುಖ್ಯಸ್ಥ ಗೇಟ್ಸ್, ಪ್ರಸಕ್ತ ವರ್ಷದಲ್ಲಿ 4 ಬಿಲಿಯನ್ ಡಾಲರ್ ಏರಿಕೆಯೊಂದಿಗೆ ಒಟ್ಟು 54 ಬಿಲಿಯನ್ ಡಾಲರ್‌ಗಳ ಸಂಪತ್ತು ಹೊಂದಿದ್ದು, ಸತತ 17ನೇ ವರ್ಷ ಕೂಡಾ ಅಮೆರಿಕದ ಶ್ರೀಮಂತ ವ್ಯಕ್ತಿ ಎನ್ನುವ ಗೌರವಕ್ಕೆ ಪಾತ್ರರಾಗಿದ್ದಾರೆ.

ಹೂಡಿಕೆದಾರ ವಾರೆನ್ ಬಫೆಟ್, 5ಬಿಲಿಯನ್ ಡಾಲರ್ ಏರಿಕೆಯೊಂದಿಗೆ, ಒ್ಟು 45 ಬಿಲಿಯನ್ ಡಾಲರ್‌ ಸಂಪತ್ತಿನೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.ಒರಾಕಲ್ ಸಂಸ್ಥೆಯ ಸಂಸ್ಥಾಪಕ ಲ್ಯಾರಿ ಎಲಿಸನ್ ಅವರ ಸಂಪತ್ತಿನಲ್ಲಿ ಯಾವುದೇ ಬದಲಾವಣೆಯಾಗದೆ, ಒಟ್ಟು 27 ಬಿಲಿಯನ್ ಡಾಲರ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.

ವಾಲ್‌ಮಾರ್ಟ್ ಸಂಸ್ಥೆಯ ಕ್ರಿಸ್ಟಿ ವಾಲ್ಟೊನ್, ಪ್ರಸಕ್ತ ವರ್ಷದ ಅವಧಿಯಲ್ಲಿ 2.5 ಬಿಲಿಯನ್ ಡಾಲರ್‌ಗಳ ಏರಿಕೆ ಕಂಡು 24 ಬಿಲಿಯನ್ ಡಾಲರ್‌ಗಳ ಸಂಪತ್ತಿನೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ.

2009ರ ಅವಧಿಯ ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನಪಡೆದಿದ್ದ 400 ಉದ್ಯಮಿಗಳಲ್ಲಿ 217 ಉದ್ಯಮಿಗಳ ಸಂಪತ್ತಿನಲ್ಲಿ ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಹೆಚ್ಚಳವಾಗಿದೆ. ಕೇವಲ 84 ಬಿಲಿಯನೇರ್‌ಗಳ ಸಂಪತ್ತಿನಲ್ಲಿ ಕುಸಿತವಾಗಿದೆ ಎಂದು ಫೋರ್ಬ್ಸ್ ವರದಿ ಮಾಡಿದೆ.
ಸಂಬಂಧಿತ ಮಾಹಿತಿ ಹುಡುಕಿ