ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ದೇಶದ ಜಿಡಿಪಿ ದರ ಶೇ.8.75ಕ್ಕೆ ಏರಿಕೆ ಸಾಧ್ಯತೆ:ಪ್ರಣಬ್ (Pranab Mukherjee | Finance Minister | Economy | Growing)
Bookmark and Share Feedback Print
 
ಆರ್ಥಿಕ ಸಮೀಕ್ಷೆಯಂತೆ ದೇಶದ ಆರ್ಥಿಕ ವೃದ್ಧಿ ದರ ಪ್ರಸಕ್ತ ವರ್ಷಾಂತ್ಯಕ್ಕೆ ಶೇ.8.75ಕ್ಕೆ ತಲುಪುವ ಸಾಧ್ಯತೆಗಳಿವೆ ಎಂದು ಕೇಂದ್ರದ ವಿತ್ತಖಾತೆ ಸಚಿವ ಪ್ರಣಬ್ ಮುಖರ್ಜಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇತ್ತಿಚೆಗೆ ನಡೆಸಿದ ಆರ್ಥಿಕ ಸಮೀಕ್ಷೆಯಲ್ಲಿ ಜಿಡಿಪಿ ದರ ವರ್ಷಾಂತ್ಯಕ್ಕೆ ಶೇ.0.5ರಿಂದ ಶೇ.8.75ಕ್ಕೆ ತಲುಪಲಿದೆ ಎನ್ನುವ ವರದಿಗಳನ್ನು ಬಹಿರಂಗಪಡಿಸಿದ್ದು, ಪ್ರಸಕ್ತ ವರ್ಷದಲ್ಲಿ ಜಿಡಿಪಿ ದರದಲ್ಲಿ ನಿರೀಕ್ಷೆಗಿಂತ ಹೆಚ್ಚಳವಾಗಿದೆ ಎಂದು ಸಚಿವ ಮುಖರ್ಜಿ ಇಂಡೋ-ಜರ್ಮನ್ ಕೈಗಾರಿಕೆ ಮತ್ತು ಆರ್ಥಿಕ ಸಹಕಾರ ಸಮ್ಮೇಳನದಲ್ಲಿ ತಿಳಿಸಿದ್ದಾರೆ.

ಜಾಗತಿಕ ಆರ್ಥಿಕ ಕುಸಿತದಿಂದಾಗಿ, ಕಳೆದ 2008-09ರ ಅವಧಿಯಲ್ಲಿ ದೇಶದ ಆರ್ಥಿಕ ವೃದ್ಧಿ ದರ ಶೇ.9ರಿಂದ ಶೇ.6.7ಕ್ಕೆ ಇಳಿಕೆ ಕಂಡಿತ್ತು.

ಜಾಗತಿಕ ಆರ್ಥಿಕ ಕುಸಿತದಿಂದ ಹೊರಬರಲು ಕೇಂದ್ರ ಸರಕಾರ ಉತ್ತೇಜನ ಪ್ಯಾಕೇಜ್‌ಗಳನ್ನು ಘೋಷಿಸಿದ್ದಲ್ಲದೇ ತೆರಿಗೆ ವಿನಾಯಿತಿ ನೀಡಿ ಸಾರ್ವಜನಿಕ ವೆಚ್ಚವನ್ನು ಹೆಚ್ಚಿಸಿದ್ದರಿಂದ ಜಿಡಿಪಿ ದರ ಶೇ.7.4ಕ್ಕೆ ಏರಿಕೆಯಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ