ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಇಲೆಕ್ಟ್ರಿಕ್ ಕಾರು: ಒಂದು ಸಾರಿ ಚಾರ್ಜ್ ಮಾಡಿ 130 ಕಿ.ಮಿ ಪ್ರಯಾಣಿಸಿ (Hyundai Motor | South Korea | Electric car)
Bookmark and Share Feedback Print
 
PTI
ನಿರಂತರ ತೈಲ ದರಗಳ ಏರಿಕೆಯಿಂದಾಗಿ ಕಂಗಾಲಾಗಿರುವ ವಾಹನಗಳ ಮಾಲೀಕರಿಗೆ, ಸಂತಸದ ಸುದ್ದಿಯೊಂದು ಬಂದಿದೆ.ದಕ್ಷಿಣ ಕೊರಿಯಾದ ವಾಹನೋದ್ಯಮ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಹುಂಡೈ ಮೋಟಾರ್ ಪರಿಪೂರ್ಣವಾದ ಇಲೆಕ್ಟ್ರಿಕ್ ಕಾರನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ.

ಹುಂಡೈಐ10 ಮಾದರಿಯಲ್ಲಿರುವ ಇಲೆಕ್ಟ್ರಿಕ್ ಕಾರು, ಪ್ರಸಕ್ತ ವರ್ಷದ ಅವಧಿಯಲ್ಲಿ ಮಾರುಕಟ್ಟೆಗೆ ಬರಲಿದೆ.ಇದರಿಂದಾಗಿ ಪೆಟ್ರೋಲ್, ಡೀಸೆಲ್ ದರಗಳ ಏರಿಕೆಯಿಂದ ತತ್ತರಿಸಿದ ಗ್ರಾಹಕರಿಗೆ ನೆಮ್ಮದಿಯ ದಿನಗಳು ಎದುರು ನೋಡುವ ಅವಕಾಶಗಳು ದೊರೆಯಲಿವೆ.

2500 ಇಲೆಕ್ಟ್ರಿಕ್ ಕಾರುಗಳಿಗೆ ಎಸ್‌ಕೆ ಎನರ್ಜಿ ಬ್ಯಾಟರಿಗಳನ್ನು ಅಳವಡಿಸಲಾಗಿದ್ದು, ಸಿಯುವಿ ಮಾದರಿಯ ಕಾರು ಒಂದು ಬಾರಿ ಚಾರ್ಜ್ ಮಾಡಿದಲ್ಲಿ 130 ಕೀ.ಮಿವರೆಗೆ ಪ್ರಯಾಣಿಸಲಿದೆ. ಬ್ಲೂಆನ್‌ ಮಾದರಿಯ ಕಾರು ಒಂದು ಬಾರಿ ಚಾರ್ಜ್ ಮಾಡಿದಲ್ಲಿ 140 ಕಿ.ಮಿ ದೂರದವರೆಗೆ ಪ್ರಯಾಣಿಸಲಿದೆ.

ಹುಂಡೈ ಕಂಪೆನಿ ಪ್ರಸ್ತುತ ಕ್ರಾಸ್ ಯುಟಿಲಿಟಿ ವೆಹಿಕಲ್ಸ್‌ ಮಾದರಿಯ 2 ಸಾವಿರ ಕಾರುಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲು ನಿರ್ಧರಿಸಿದೆ. ಬ್ಲೂಒನ್ ಮಾದರಿಯ 500 ಕಾರುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ.

ಹುಂಡೈ ಕಂಪೆನಿ, ಮುಂಬರುವ ಎರಡು ವರ್ಷಗಳ ಅವಧಿಯಲ್ಲಿ ವಿಶ್ವದ ಹಲವು ರಾಷ್ಟ್ರಗಳಿಗೆ ರಫ್ತು ಮಾಡಲು ನಿರ್ಧರಿಸಿದೆ. ಇಲೆಕ್ಟ್ರಾನಿಕ್ ಕಾರುಗಳು ಮಾರುಕಟ್ಟೆಗಳನ್ನು ಪ್ರವೇಶಿಸಿದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಿಂದ ತಪ್ಪಿಸಿಕೊಳ್ಳಬಹುದಾಗಿದೆ.

ಹುಂಡೈ ಕಂಪೆನಿ,ಕ್ರಾಸ್ ಯುಟಿಲಿಟಿ ವೆಹಿಕಲ್ಸ್ ಮಾದರಿಯ ಗ್ಯಾಸೋಲಿನ್-ಆಧಾರಿತ ಕಾರುಗಳನ್ನು ಶೀಘ್ರದಲ್ಲಿ ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಗುವುದು ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ