ಭಾರತ ವಿದೇಶಿ ಬ್ಯಾಂಕ್‌ಗಳ ಸ್ಥಾಪನೆಗೆ ಉತ್ತೇಜನ ನೀಡಲಿದೆ. ಆದರೆ ವಿದೇಶಿ ಬ್ಯಾಂಕ್‌ಗಳು ಶಾಖೆಗಳನ್ನು ಹೊಂದುವ ಬದಲಿಗೆ ಸಂಪೂರ್ಣ ಮಾಲೀಕತ್ವದ ಬ್ಯಾಂಕ್‌ಗಳನ್ನು ಹೊಂದಬೇಕು ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ನ ಉಪಗೌವರ್ನರ್ ಹೇಳಿದ್ದಾರೆ.
ವಿದೇಶಿ ಬ್ಯಾಂಕ್‌ಗಳು ಭಾರತವನ್ನು ಕೇಂದ್ರವಾಗಿರಿಸಿಕೊಂಡು ಬ್ಯಾಂಕ್‌ಗಳನ್ನು ಸ್ಥಾಪಿಸಿದಲ್ಲಿ ದೇಶಿಯ ಗ್ರಾಹಕರಿಗೆ ಅನುಕೂಲವಾಗಲಿದೆಯೇ ಎನ್ನುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಆರ್‌ಬಿಐ ಉಪಗೌವರ್ನರ್ ಉಷಾ ಥೋರಟ್ ತಿಳಿಸಿದ್ದಾರೆ.
ವಿಶೇಷವಾಗಿ ವಿದೇಶಗಳ ಬೃಹತ್ ಪ್ರಮಾಣದ ಬ್ಯಾಂಕ್‌ಗಳಿಗೆ ದೇಶದಲ್ಲಿ ವಹಿವಾಟಿಗೆ ಉತ್ತಮ ಅವಕಾಶಗಳಿವೆ ಎಂದು ಥೋರಟ್ ಹೇಳಿದ್ದಾರೆ.
ವಿದೇಶಿ ಬ್ಯಾಂಕ್‌ಗಳು ಭಾರತದಲ್ಲಿ ವಹಿವಾಟು ಆರಂಭಿಸುವ ಕುರಿತಂತೆ, ಮಾಸಾಂತ್ಯಕ್ಕೆ ಅಂತಿಮ ವರದಿ ಹೊರಬೀಳುವ ಸಾಧ್ಯತೆಗಳಿವೆ.ಈಗಾಗಲೇ ವಿದೇಶಿ ಬ್ಯಾಂಕ್‌ಗಳು ಶಾಖಾ ಬ್ಯಾಂಕ್‌ಗಳನ್ನು ಆರಂಭಿಸುವ ಮೂಲಕ ಭಾರತದಲ್ಲಿ ವಹಿವಾಟು ನಡೆಸುತ್ತಿವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಮೂಲಗಳು ತಿಳಿಸಿವೆ.