ನವದೆಹಲಿ, ಶುಕ್ರವಾರ, 24 ಸೆಪ್ಟೆಂಬರ್ 2010( 13:27 IST )
ಭಾರತೀಯರಿಗೆ ವೀಸಾ ಮತ್ತು ಕಾರ್ಯ ಅನುಮತಿಯನ್ನು ಸಡಿಲಗೊಳಿಸುವಂತೆ ಕೇಂದ್ರ ವಿತ್ತಖಾತೆ ಸಚಿವ ಪ್ರಣಬ್ ಮುಖರ್ಜಿ ಜರ್ಮನಿಗೆ ಒತ್ತಾಯಿಸಿದ್ದು, ಇದರಿಂದಾಗಿ ಉಭಯ ದೇಶಗಳ ವಹಿವಾಟು ಹಾಗೂ ಹೂಡಿಕೆಗೆ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.
ಜರ್ಮನಿಯ ವೀಸಾ ಮತ್ತು ಕಾರ್ಯ ಅನುಮತಿ ನಿಯಮಗಳಿಂದಾಗಿ ಉಭಯ ದೇಶಗಳ ವಹಿವಾಟಿಗೆ ಅಡ್ಡಿಯಾಗಿವೆ.ಆದ್ದರಿಂದ ಇಂತಹ ನಿಯಮಗಳನ್ನು ಸಡಿಲಗೊಳಿಸಬೇಕು ಎಂದು ಸಚಿವ ಮುಖರ್ಜಿ ಇಂಡೋ-ಜರ್ಮನ್ ಕೈಗಾರಿಕೆ ಮತ್ತು ಆರ್ಥಿಕ ಸಹಕಾರ ಶೃಂಗಸಮ್ಮೇಳನದಲ್ಲಿ ತಿಳಿಸಿದ್ದಾರೆ.
ಜರ್ಮನಿಯ ಆರ್ಥಿಕ ಮತ್ತು ತಂತ್ರಜ್ಞಾನ ಖಾತೆ ಸಚಿವ ರೈನರ್ ಬ್ರೂಡೆರ್ಲೆ ಮಾತನಾಡಿ, ವಿದೇಶಿ ನೀತಿಗಳಲ್ಲಿ ಸಡಿಲಿಕೆ ತರುವ ಮೂಲಕ ಭಾರತದೊಂದಿಗೆ ವಹಿವಾಟು ಮತ್ತು ಹೂಡಿಕೆಯನ್ನು ಬಲಪಡಿಸಲು ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದರು.
ವಹಿವಾಟು ವೃದ್ಧಿಗೆ ಉದ್ಯೋಗ, ಬಂಡವಾಳ ಮತ್ತು ತಂತ್ರಜ್ಞಾನಗಳ ಅಗತ್ಯವಿದೆ ಎನ್ನುವ ಅರಿವು ನಮಗಿದೆ.ಜರ್ಮನಿ ಅದಕ್ಕಾಗಿ ಬದ್ಧವಾಗಿದೆ ಎಂದು ತಿಳಿಸಿದ್ದಾರೆ.
ಭಾರತ-ಯುರೋಪ್ ರಾಷ್ಟ್ರಗಳು ವಹಿವಾಟು ಒಪ್ಪಂದಗಳಿಗಾಗಿ, ನಿಯಮಗಳಲ್ಲಿ ಸಡಿಲಿಕೆ ತರುವುದು ಅಗತ್ಯವಾಗಿದೆ ಎಂದು ಹೇಳಿದ್ದಾರೆ.
ಭಾರತ ಮತ್ತು ಜರ್ಮನಿ ರಾಷ್ಟ್ರಗಳು ಮುಂಬರುವ 2012ರ ವೇಳೆಗೆ 20 ಬಿಲಿಯನ್ ಯುರೋ ದ್ವಿಪಕ್ಷೀಯ ವಹಿವಾಟಿನ ಗುರಿಯನ್ನು ಹೊಂದಿವೆ ಎಂದು ಮೂಲಗಳು ತಿಳಿಸಿವೆ.