ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಭಾರತ-ಕೆನಡಾ ವಹಿವಾಟಿನಲ್ಲಿ ಮೂರು ಪಟ್ಟು ಹೆಚ್ಚಳ:ಶರ್ಮಾ (Stephen harper | Anand sharma)
Bookmark and Share Feedback Print
 
ಭಾರತ ಮತ್ತು ಕೆನಡಾ ದೇಶಗಳ ಮಧ್ಯದ ದ್ವಿಪಕ್ಷೀಯ ವಹಿವಾಟು ಮುಂಬರುವ ಐದು ವರ್ಷಗಳಲ್ಲಿ ದ್ವಿಗುಣವಾಗಿ 15ಬಿಲಿಯನ್ ಡಾಲರ್‌ಗಳಿಗೆ ತಲುಪಲಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಖಾತೆ ಸಚಿವ ಆನಂದ್ ಶರ್ಮಾ ಹೇಳಿದ್ದಾರೆ.

ಭಾರತದ ಕೈಗಾರಿಕೋದ್ಯಮಿಗಳ ನಿಯೋಗದ ನೇತೃತ್ವವಹಿಸಿರುವ ಶರ್ಮಾ, ಕೆನಡಾದ ಉದ್ಯಮಿಗಳೊಂದಿಗೆ ಚರ್ಚೆ ನಡೆಸಿ ಹೂಡಿಕೆ ಮತ್ತು ವಹಿವಾಟು ವೃದ್ಧಿಗೆ ಅಹ್ವಾನ ನೀಡಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಾಗತಿಕ ಆರ್ಥಿಕ ಕುಸಿತದ ಹಿಂದಿನ ವರ್ಷದ ಅವಧಿಯಲ್ಲಿ ಉಭಯ ದೇಶಗಳ ವಹಿವಾಟು 5ಬಿಲಿಯನ್ ಡಾಲರ್‌ಗಳಿಗೆ ತಲುಪಿತ್ತು. ನಂತರದ ವರ್ಷಗಳಲ್ಲಿ ಗಣನೀಯವಾಗಿ ಕುಸಿತ ಕಂಡಿತ್ತು. ಆದರೆ, ಉಭಯ ದೇಶಗಳ ಪ್ರಧಾನಿಗಳು ವಹಿಸಿದ ಮುತುವರ್ಜಿಯಿಂದಾಗಿ ಮುಂಬರುವ 2015ರ ವೇಳೆಗೆ 15 ಬಿಲಿಯನ್ ಡಾಲರ್‌ಗಳಿಗೆ ತಲುಪಲಿದೆ ಎಂದರು.

ಕೇಂದ್ರದ ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಆನಂದ್ ಶರ್ಮಾ, ಕೆನಡಾದ ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಪೀಟರ್ ವಾನ್ ಸೊನ್ ಅವರನ್ನು ಭೇಟಿ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕೆನಡಾ ಭಾರತಕ್ಕೆ ಅರಣ್ಯ ಉತ್ಪನ್ನಗಳು, ನಿಕ್ಕಲ್, ಏರ್‌ಕ್ರಾಫ್ಟ್, ವಿದ್ಯುತ್ ಯಂತ್ರಗಳು, ಮೀನು ಮತ್ತು ಸಾಗರೋತ್ಪನ್ನ ಉತ್ಪನ್ನಗಳು, ಕೃಷಿ ಉತ್ಪನ್ನಗಳನ್ನು ಭಾರತಕ್ಕೆ ರಫ್ತು ಮಾಡುತ್ತಿದೆ.ಭಾರತ ಕೆನಡಾ ದೇಶಕ್ಕೆ ಅಮೂಲ್ಯವಾದ ಹರಳುಗಳು, ವಜ್ರ, ಆಭರಣಗಳನ್ನು ರಫ್ತು ಮಾಡುತ್ತಿದೆ.
ಸಂಬಂಧಿತ ಮಾಹಿತಿ ಹುಡುಕಿ