ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » 2ಸಾವಿರಕ್ಕಿಂತ ಹೆಚ್ಚಿನ ಸಂಖ್ಯೆಯ ಗ್ರಾಮಗಳಿಗೆ ಬ್ಯಾಂಕ್ ಸೇವೆ (Rural development | Banking services | Money transaction | Bank-Pratinidhi)
2ಸಾವಿರಕ್ಕಿಂತ ಹೆಚ್ಚಿನ ಸಂಖ್ಯೆಯ ಗ್ರಾಮಗಳಿಗೆ ಬ್ಯಾಂಕ್ ಸೇವೆ
ಜೈಪುರ್, ಶುಕ್ರವಾರ, 24 ಸೆಪ್ಟೆಂಬರ್ 2010( 17:36 IST )
ಗ್ರಾಮೀಣಾಭಿವೃದ್ಧಿಯನ್ನು ಗುರಿಯಾಗಿಸಿಕೊಂಡು,2 ಸಾವಿರ ಜನಸಂಖ್ಯೆಯನ್ನು ಹೊಂದಿರುವ ಗ್ರಾಮಗಳ ಆರ್ಥಿಕ ವಹಿವಾಟಿಗಾಗಿ ಬ್ಯಾಂಕ್ ಸೇವೆಗಳನ್ನು ಒದಗಿಸಲಾಗುವುದು ಎಂದು ಹಣಕಾಸು ಖಾತೆ ರಾಜ್ಯ ಸಚಿವ ನಮೋ ನರೈನ್ ಮೀನಾ ಹೇಳಿದ್ದಾರೆ.
2 ಸಾವಿರ ಜನಸಂಖ್ಯೆಗಿಂತ ಹೆಚ್ಚಳವಾಗಿರುವ ಗ್ರಾಮಗಳಲ್ಲಿ 'ಬ್ಯಾಂಕ್ ಪ್ರತಿನಿಧಿ'ಯನ್ನು ನೇಮಕ ಮಾಡಲಾಗುವುದು ಎಂದು ಟೊಂಕ್ ಜಿಲ್ಲೆಯ ಟೊಡಾರೈಸಿಂಗ್ ನಗರದಲ್ಲಿ ಬ್ಯಾಂಕ್ ಆಫ್ ಬರೋಡಾದ 375 ಶಾಖೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ದೇಶದಲ್ಲಿ ಸುಮಾರು ಒಂದು ಲಕ್ಷ ಗ್ರಾಮಗಳನ್ನು ಬ್ಯಾಂಕ್ ಸೇವೆಗಳನ್ನು ಒದಗಿಸಲಾಗುವುದು. ಪ್ರತಿ ವರ್ಷ 4 ಸಾವಿರದಿಂದ 5 ಸಾವಿರ ಬ್ಯಾಂಕ್ ಶಾಖೆಗಳನ್ನು ಆರಂಭಿಸಲಾಗುತ್ತದೆ ಎಂದು ಸಚಿವ ಮೀನಾ ತಿಳಿಸಿದ್ದಾರೆ.
ಮುಂಬರುವ 2013ರ ಅವಧಿಯಲ್ಲಿ, ಟೊಂಕ್ ಜಿಲ್ಲೆಯಲ್ಲಿ ಪ್ರತಿಯೊಂದು ಗ್ರಾಮ ಬ್ಯಾಂಕ್ ಸೌಲಭ್ಯ ಒದಗಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
ಕೇಂದ್ರ ಸರಕಾರ ಮುಂದಿನ ವರ್ಷದಿಂದ ರಿಕ್ಷಾ ಚಾಲಕರಿಗೆ ಕಾರ್ಮಿಕರಿಗಾಗಿ 'ಸ್ವಾವಲಂಬನ' ಯೋಜನೆಯನ್ನು ಜಾರಿಗೊಳಿಸಲು ನಿರ್ಧರಿಸಿದೆ ಎಂದು ಸಚಿವ ಮೀನಾ ತಿಳಿಸಿದ್ದಾರೆ.
ಸ್ವಾವಲಂಬನಾ ಯೋಜನೆಯಲ್ಲಿ ಕೇಂದ್ರ ಸರಕಾರ ಕಾರ್ಮಿಕರಿಗಾಗಿ 1000 ರೂಪಾಯಿ ಹೂಡಿಕೆ ಮಾಡಲಿದ್ದು, 1000 ರೂಪಾಯಿಗಳನ್ನು ಕಾರ್ಮಿಕರು ಭರಿಸಬೇಕಾಗುತ್ತದೆ. ನಂತರ ಕಾರ್ಮಿಕರಿಗೆ ಪಿಂಚಣಿ ರೂಪದಲ್ಲಿ ನೀಡಲಾಗುವುದು ಎಂದು ಹಣಕಾಸು ಖಾತೆ ರಾಜ್ಯ ಸಚಿವ ನಮೋ ನರೈನ್ ಮೀನಾ ಹೇಳಿದ್ದಾರೆ.